ಕಾರ್ಕಳ: ತಾಲೂಕು ಕುಲಾಲ ಸುಧಾರಕ ಸಂಘದ ವತಿಯಿಂದ ವಿದ್ಯಾರ್ಥಿ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕುಲಾಲ ಸಂಘದ ಅಜೀವ ಸದಸ್ಯತ್ವ ಹೊಂದಿರುವ ಮನೆಯವರ ವಿದ್ಯಾರ್ಥಿಗಳು ಪ್ರಸ್ತುತ PUC ಮತ್ತು PUC ಕ್ಕಿಂತ ಮೇಲ್ಪಟ್ಟು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯವರು ಕಳೆದ ಸಾಲಿನಲ್ಲಿ 85% ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು, ವಿದ್ಯಾರ್ಥಿ ಪ್ರೋತ್ಸಾಹ ಧನದ ಅರ್ಜಿಯೊಂದಿಗೆ ವ್ಯಾಸಂಗ ದೃಢೀಕರಣ ಪತ್ರ, ಅಂಕ ಪಟ್ಟಿ ಹಾಗೂ ಆಧಾರ ನಕಲು ಪ್ರತಿಯನ್ನು ಅ. 15 ರ ಒಳಗೆ ಸಂಘದ ಕಚೇರಿ ಕಾರ್ಕಳ ತಾಲೂಕು ಕುಲಾಲ ಸುಧಾರಕ ಸಂಘ (ರಿ) ಜೋಡುರಸ್ತೆ, ಕುಕ್ಕುಂದೂರು, ಕಾರ್ಕಳ 576117 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಮತ್ತು ಹೆಚ್ಚಿನ ಮಾಹಿತಿಗಾಗಿ ಆಡಳಿತ ಮಂಡಳಿಯ ಸದಸ್ಯರು, ಕುಲಾಲ ಸಭಾ ಭವನ ಕಾರ್ಕಳ, ಕುಂಭಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ಜೋಡುರಸ್ತೆ / ಅಜೆಕಾರ್ ಶಾಖೆಯನ್ನು ಸಂರ್ಪಕಿಸಬಹುದು.

ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9964241014, 8105878395 ಸಂಪರ್ಕಿಸಬಹುದು.
























