ಬೆಂಗಳೂರು: ವನ್ಯಜೀವಿ ಅಭಯಾರಣ್ಯಗಳಲ್ಲಿ ಸಫಾರಿಗೆ ಅವಕಾಶ ನೀಡುತ್ತಿರುವುದು ನೈಸರ್ಗಿಕ ಪರಿಸರದ ದೃಷ್ಟಿಯಿಂದ ಸೂಕ್ತ ಅಲ್ಲ ಎಂದು ಬಿಜೆಪಿ ನಾೊರಕಸಿ.ಟಿ. ರವಿ ಅವರು ವಿಧಾನ ಪರಿಷತ್ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿಯ ಚರ್ಚೆಯ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಐವಾನ್ ಡಿ’ಸೋಜಾ ಮತ್ತು ಡಿ.ಟಿ. ಶ್ರೀನಿವಾಸ್ ಮಧ್ಯೆ ಪ್ರವೇಶಿಸಿ ಮಾತನಾಡಿದ್ದು, ನೀವು ಪ್ರವಾಸೋದ್ಯಮ ಸಚಿವರಾಗಿದ್ದ ಸಮಯದಲ್ಲಿ ಈ ಚಟುವಟಿಕೆಯನ್ನು ಯಾಕೆ ನಿಲ್ಲಿಸಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಿ.ಟಿ. ರವಿ ಅವರು ತಾವಿಲ್ಲಿ ಕಸ್ತೂರಿ ರಂಗನ್ ವರದಿಯ ವಿಷಯಕ್ಕೆ ಸಂಬಂಧಿಸಿದ ಹಾಗೆ ಚರ್ಚೆ ನಡೆಸುತ್ತಿರುವುದು ಎಂದು ಸ್ಪಷ್ಟಪಡಿಸಿದರು.
ಸಚಿವ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ಸಿ.ಟಿ. ರವಿ ಅವರು ಯಾವಾಗಲೂ ಹೊಡಿ, ಕಡಿ, ಬಡಿ ಎಂದು ಆಕ್ರಮಣಕಾರಿ ಮಾತುಗಳನ್ನು ಆಡುವವರು ಇಂದು ಯಾರೋ ಶಾಂತವಾಗಿದ್ದಾರೆ. ಅವರಿಗೆ ಹೆಚ್ಚಿನ ಸಮಯ ನೀಡುವಂತೆ ವ್ಯಂಗ್ಯವಾಡಿದ್ದಾರೆ.

ರಿಜ್ವಾನ್ ಅರ್ಷದ್‌ಗೆ ತಿರುಗೇಟು ನೀಡಿದ ಅವರು, ದಯೆಯೇ ಧರ್ಮದ ಮೂಲ ಎನ್ನುವ ಧರ್ಮದಲ್ಲಿ ಹುಟ್ಟಿದವನು ನಾವು. ನನ್ನ ಧರ್ಮ ಬೇರೆಯವರನ್ನು ಕೊಲ್ಲುವುದನ್ನು ಹೇಳಿಕೊಟ್ಟಿಲ್ಲ. ನನ್ನ ಮಾತು ಮಾತ್ರ ಆಕ್ರಮಣಕಾರಿ. ಹೃದಯ ಶಾಂತ ಎಂದಿದ್ದಾರೆ.























