ಕಾರ್ಕಳ : ನಿವೃತ್ತ ಯೋಧ, ಹಿರಿಯ ಭೂಮಾಪನ ಸರ್ವೆಯರ್, ಪ್ರಗತಿಪರ ಕೃಷಿಕ ನೀರೆ ಸಹದೇವ ನಾಯಕ್ (67) ಅಲ್ಪಕಾಲದ ಅಸೌಖ್ಯದಿಂದ ಜು. 29ರಂದು ನಿಧನ ಹೊಂದಿದರು. ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿರುವ ಅವರು ನಿವೃತ್ತಿ ಅನಂತರ ಊರಿಗೆ ಆಗಮಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸ್ಥಳೀಯ ಯುನಿಟಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾಗಿ, ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಈರ್ವರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರವು ಬುಧವಾರ ಸಂಜೆ 8 ಗಂಟೆಗೆ ನೀರೆಯ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ನಿವೃತ್ತ ಯೋಧ ನೀರೆ ಸಹದೇವ ನಾಯಕ್ ಅಸ್ತಂಗತ











