ಉಡುಪಿ : ಶಾಸಕ ಯಶ್ಪಾಲ್ ಸುವರ್ಣ ಅವರು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು ಯಾವುದೇ ಪುರಾವೆ ಇಲ್ಲದೆ 24 ಗಂಟೆಗಳ ಕಾಲ ನಶೆಯಲ್ಲಿ ಇರುತ್ತಾರೆ ಎಂದು ನಿರಾಧಾರ ಹಾಗೂ ಮಾನಹಾನಿಕರ ಆರೋಪ ಮಾಡಿರುವುದು, ರಾಹುಲ್ ಗಾಂಧಿ ಅವರ ವಂಶವನ್ನು ಧ್ವಂಸ ಮಾಡುತ್ತೇವೆ ಎಂಬ ಬೆದರಿಕೆಯ ಹೇಳಿಕೆಯನ್ನು ನೀಡಿ ಸಮಾಜದಲ್ಲಿ ದ್ವೇಷ, ಉದ್ವಿಗ್ನತೆ ಮತ್ತು ಅಶಾಂತಿಯನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕಾರ್ಕಳ ನಗರ ಯುವ ಕಾಂಗ್ರೆಸ್ ವತಿಯಿಂದ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.
ಯಶ್ಪಾಲ್ ಸುವರ್ಣ ವಿರುದ್ಧ ಕಾರ್ಕಳ ನಗರ ಕಾಂಗ್ರೆಸ್ ವತಿಯಿಂದ ದೂರು











