ಕಾರ್ಕಳ : ಕಡ್ತಲ ಅಂಗನವಾಡಿಗೆ ಪಂಪ್ ಸೆಟ್ ಅಳವಡಿಸಲು 38 ಸಾವಿರ ರೂ. ಧನಸಹಾಯ ನೀಡಿದ ಬಾಲ್ಯ ಫೌಂಡೇಶನ್ ನ ನಾಗರಾಜ್ ಶಂಕರ್ ಅವರನ್ನು ಕಡ್ತಲ ಅಂಗನವಾಡಿ ಬಾಲ ವಿಕಾಸ ಸಮಿತಿಯಿಂದ ಜೂ. 20ರಂದು ಸನ್ಮಾನಿಸಲಾಯಿತು. ಅಂಗನವಾಡಿ ಶಿಕ್ಷಕಿ ಶ್ವೇತಾ ಸತೀಶ್ ಹೆಗ್ಡೆ ಸ್ವಾಗತಿಸಿದರು. ಅರುಣ್ ಕುಮಾರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಲತಾ ವಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಖಾ, ನಿಕಟ ಪೂರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಹೆಗ್ಡೆ, ಬಾಲ್ಯ ಫೌಂಡೇಶನ್‌ನ ನಾಗರಾಜ ಹಾಗೂ ಜೀವನ್, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸುಷ್ಮಾ, ಸಂಜೀವ ಪೂಜಾರಿ, ಮಾಲತಿ ಕುಲಾಲ್, ರಕ್ಷಿತ್ ಇನ್ನಿತರರು ಉಪಸ್ಥಿತರಿದ್ದರು.
ಬಾಲ್ಯ ಫೌಂಡೇಶನ್ ವತಿಯಿಂದ ಕಡ್ತಲ ಅಂಗನವಾಡಿಗೆ ಪಂಪ್‌ಸೆಟ್ ಅಳವಡಿಕೆಗೆ 38 ಸಾವಿರ ರೂ. ಕೊಡುಗೆ

















