ಕಾರ್ಕಳ : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸುವ ಕೆಸಿಇಟಿ ಪರೀಕ್ಷೆಯಲ್ಲಿ ಕ್ರೈಸ್ಟ್‌ಕಿಂಗ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಲ್ಲಿ 500ರೊಳಗೆ ಒಂದು ಹಾಗೂ 1000ದೊಳಗೆ ಇಬ್ಬರು ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ.
ಈ ಬಾರಿ ಸಂಸ್ಥೆಯ ಒಟ್ಟು 152 ವಿದ್ಯಾರ್ಥಿಗಳು ಕೆಸಿಇಟಿ ಪರೀಕ್ಷೆ ಬರೆದಿದ್ದು ವಿಜ್ಞಾನ ವಿಭಾಗದಲ್ಲಿ ಅಗ್ರ ಇಪ್ಪತ್ತು ಸಾವಿರದೊಳಗೆ 129 ರ‍್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ವಿಜೇತ್ ಶೆಟ್ಟಿಗಾರ್ 236ನೇ ರ‍್ಯಾಂಕ್, ಸುಮಂತ್ ಎನ್. ಕೆ. 959ನೇ ರ‍್ಯಾಂಕ್, ವಿಜೇತ್ ಆರ್. 1020ನೇ ರ‍್ಯಾಂಕ್, ರೋಷನ್ ಥೋರಸ್ 2176ನೇ ರ‍್ಯಾಂಕ್, ದಿಶಾ ಡಿಮೆಲ್ಲೊ 2148ನೇ ರ‍್ಯಾಂಕ್, ಅಪೇಕ್ಷಾ ಜೈನ್ 2144ನೇ ರ‍್ಯಾಂಕ್, ಹೇಮಂತ್ ಗೌಡ 2100ನೇ ರ‍್ಯಾಂಕ್, ಅನುಷ್ ಶೆಟ್ಟಿ 2381ನೇ ರ‍್ಯಾಂಕ್, ಸಿಯಾ ವೆನಿಶಾ ಡಿಸೋಜ 3773ನೇ ರ‍್ಯಾಂಕ್, ಸ್ಮೃತಿ ಮರಾಠೆ 4094ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಸಂಸ್ಥೆಯು ಈ ಸಾಲಿನಲ್ಲಿ ಅಗ್ರ 500 ರ ಒಳಗೆ ಒಂದು, 1000 ದ ಒಳಗೆ ಎರಡು ರ‍್ಯಾಂಕ್‌ಗಳನ್ನು ಪಡೆದಿದೆ. ಉಳಿದಂತೆ ಐದು ಸಾವಿರದೊಳಗೆ 25, ಹತ್ತು ಸಾವಿರದೊಳಗೆ 63, ಹದಿನೈದು ಸಾವಿರದೊಳಗೆ 93 ಹಾಗೂ ಇಪ್ಪತ್ತು ಸಾವಿರದೊಳಗೆ 129 ರ‍್ಯಾಂಕ್‌ಗಳನ್ನು ಸಂಸ್ಥೆಯು ಪಡೆದುಕೊಂಡಿದೆ.










