ಕಾರ್ಕಳ : ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ನಿಟ್ಟೆ ಡಾ.ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜಿಗೆ ರಾಜ್ಯ ಮಟ್ಟದಲ್ಲಿ 4 ರ‍್ಯಾಂಕ್‌ಗಳು ಲಭಿಸಿವೆ. ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಅಮೃತಾ ಕಾಮತ್ 600ರಲ್ಲಿ 596 ಅಂಕಗಳೊಂದಿಗೆ ರಾಜ್ಯ ಮಟ್ಟಕ್ಕೆ 5ನೇ ರ‍್ಯಾಂಕ್ ಹಾಗೂ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಆಡ್ಲಿನ್ ವಿಯಾನಾ ಮಥಾಯಸ್ 600ರಲ್ಲಿ 593 ಅಂಕಗಳೊಂದಿಗೆ ರಾಜ್ಯ ಮಟ್ಟಕ್ಕೆ 7ನೇ ರ‍್ಯಾಂಕ್, ನಿಧಿ ದೀಪಕ್ ಮೆಂಡನ್ 600ರಲ್ಲಿ 591ಅಂಕಗಳೊಂದಿಗೆ 9ನೇ ರ‍್ಯಾಂಕ್ ಮತ್ತು ವರ್ಷಾ ಎಸ್. ಭಂಡಾರಿ 600ರಲ್ಲಿ 590 ಅಂಕಗಳೊಂದಿಗೆ 10ನೇ ರ‍್ಯಾಂಕನ್ನು ಗಳಿಸಿರುತ್ತಾರೆ. ಇದರೊಂದಿಗೆ ವಾಣಿಜ್ಯ ವಿಭಾಗದ ಪ್ರತಿಷ್ಠಾ ಪ್ರಭು 600ರಲ್ಲಿ 589 ಮತ್ತು ಕು. ನಂದಿನಿ ಎ. ಶೆಟ್ಟಿ 600ರಲ್ಲಿ 585 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪರೀಕ್ಷೆಗೆ ಹಾಜರಾದ 278 ವಿದ್ಯಾರ್ಥಿಗಳಲ್ಲಿ 146 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಮತ್ತು 120 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದು, ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 99.4% ಮತ್ತು ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ದಾಖಲಾಗಿರುತ್ತದೆ.
ನಿಟ್ಟೆ ಪದವಿಪೂರ್ವ ಕಾಲೇಜಿಗೆ 4 ರ‍್ಯಾಂಕ್‌ಗಳು – ಅಮೃತಾ ಕಾಮತ್ 596 ಅಂಕ




































