ಕಾರ್ಕಳ : ದ್ವಿತೀಯ ಪಿಯುಸಿ ಪರೀಕ್ಷೆ ಪಲಿತಾಂಶದಲ್ಲಿ ಕಾರ್ಕಳ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅಪೇಕ್ಷಾ ಕೆ.ಎ. 596 (99.33), ಆದಿತ್ಯ ಗುರುನಾಥ ಪ್ರಭು 596 (99.33), ಸೋನು ಚೌದರಿ 591 (98.5), ವಿನಾಯಕ ಶೆಣೈ 591(98.5), ಸುವಿಧಾ ಕೆ.ಯು. 590 (98.33), ಅಹಮದುಲ್ ಕಬೀರ್ 590 (98.33) ಅಂಕಗಳನ್ನು ಹಾಗೂ ವಿಜ್ಞಾನ ವಿಭಾಗದಲ್ಲಿ ಆಶಯ್ ಜೈನ್ 593 (98.83), ಸಂಜನಾ ಬಿ.ಸಿ. 590 (98.33), ಅನೂಪ್ 590 (98.33), ಅಮೂಲ್ಯ ವಿನಾಯಕ ಭಗವತಿ 590 (98.33) ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಪರೀಕ್ಷೆಗೆ ಹಾಜರಾದ 355 ವಿದ್ಯಾರ್ಥಿಗಳ ಪೈಕಿ 154 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 168 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 25 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇಕಡಾ 98.03 ಫಲಿತಾಂಶ ದಾಖಲಿಸಿದೆ. ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ, ಶಿಕ್ಷಕೇತರ ವೃಂದದವರು ಅಭಿನಂದಿಸಿರುತ್ತಾರೆ.
ಶ್ರೀ ಭುವನೇಂದ್ರ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ




































