ಬೋಳ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ

ಕಾರ್ಕಳ : ಬೋಳ ಪಿಲಿಯೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಪ್ರತಿಷ್ಠಾ ಪುರಸ್ಸರ ಬ್ರಹ್ಮಕಲಶೋತ್ಸವಕ್ಕೆ ಎ. 3ರಂದು ಚಾಲನೆ ದೊರೆತಿದ್ದು, ಎ. 14ರವರೆಗೆ ನಡೆಯಲಿದೆ.
ವೇದಮೂರ್ತಿ ಕಡಂದಲೆ ಕೆ.ವಿ. ಕೃಷ್ಣ ಭಟ್ಟರ ಆಚಾರ್ಯತ್ವದಲ್ಲಿ ನೆರವೇರುತ್ತಿದೆ. ಎ. 3ರಂದು ರಾತ್ರಿ 7ಕ್ಕೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಶ್ರೀ ದೇವರಿಗೆ ಪ್ರಸನ್ನ ಪೂಜೆಯೊಂದಿಗೆ ನಡೆಯಿತು.
ಎ. 4 ಶನಿವಾರದಿಂದ 7ರ ಮಂಗಳವಾರದವರೆಗೆ ವೇದ ಪಾರಾಯಣ ಹಾಗೂ ಎ. 8ರಿಂದ 14ರವರೆಗೆ ವಿವಿಧ ದೇವತಾ ಕಾರ್ಯಕ್ರಮಗಳು ಹಾಗೂ ಎ. 10ಕ್ಕೆ ಸಾಯಂ ಗಂಟೆ 6-30ರಿಂದ ಶ್ರೀ ಗೆಜ್ಜೆಗಿರಿ ಮೇಳದವರಿಂದ “ದಕ್ಷ ಯಜ್ಞ ಗಿರಿಜಾ ಕಲ್ಯಾಣ” ಯಕ್ಷಗಾನ ಹಾಗೂ ಎ. 12ರಂದು ಬೆಳಿಗ್ಗೆ ಗಂಟೆ 4-30ರಿಂದ ಪುಣ್ಯಾಹ ವಾಚನ, ಪಂಚಾಮೃತ ಅಭಿಷೇಕ, ಗಣಹೋಮ, ಬ್ರಹ್ಮಕಲಶ ಪೂಜೆ, ಪರಿಕಲಶಾಭಿಷೇಕ. 8-45ರ ವೃಷಭ ಲಗ್ನದಲ್ಲಿ ಅಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ನಿತ್ಯ ನೈಮಿತ್ತಿಕ ನಿರ್ಣಯ, ಅವಸೃತೋಕ್ಷಣ ಬಲಿ, ಮಹಾಪೂಜೆ, ಶ್ರೀ ದೇವರ ಬಲಿ, ಪಲ್ಲಪೂಜೆ ನಡೆಯಲಿದೆ. ಸಾಯಂಕಾಲ ಗಂಟೆ 6-00ರಿಂದ ಶ್ರೀರಂಗ ಪೂಜೆ ನಡೆಯಲಿದೆ.
ದೇವಸ್ಥಾನದ ವರ್ಷಾವಧಿ ಉತ್ಸವವು ಎ. 19ರ ಭಾನುವಾರದಿಂದ ಪ್ರಾರಂಭಗೊಂಡು 21 ಮಂಗಳವಾರದಂದು ಗೋಂದೂಳು ಪೂಜೆ ಹಾಗೂ ಧೂಮಾವತಿ ದೈವದ ನೇಮೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.











































































error: Content is protected !!
Scroll to Top