ಎ. 7 – 9 : ಇರ್ವತ್ತೂರು ಕೊರಗಜ್ಜ ದೈವಸ್ಥಾನ ವರ್ಷಾವಧಿ ನೇಮೋತ್ಸವ

ಕಾರ್ಕಳ : ಕೊಳಕೆ ಇರ್ವತ್ತೂರು ಶ್ರೀ ಬ್ರಹ್ಮಮುಗೇರ ಮಹಾಕಾಳಿ ಹಲೇರ ಪಂಜುರ್ಲಿ ಸ್ವಾಮಿ ಕೊರಗಜ್ಜ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಎ. 7ರಿಂದ 9ರ ವರೆಗೆ ಜರುಗಲಿದೆ.
ಎ. 7 ಮಂಗಳವಾರ ರಾತ್ರಿ 8 ಗಂಟೆಗೆ ಧರ್ಮರಸು ಪಂಜುರ್ಲಿ ದೈವ ಮತ್ತು ಮಹಾಕಾಳಿ ದೈವದ ನೇಮೋತ್ಸವ, ಎ. 8ರ ಬುಧವಾರ ಸಂಜೆ 6 ಗಂಟೆಗೆ ಶ್ರೀ ವೇಣುಗೋಪಾಲಕೃಷ್ಣ ಭಜನಾ ಮಂಡಳಿ ಕೊಳಕೆ ಇರ್ವತ್ತೂರು ಇವರಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8ಗಂಟೆಗೆ ಬ್ರಹ್ಮ ಮುಗೇರ ದೈವ, ತನ್ನಿಮಾನಿಗ ದೈವದ ನೇಮೋತ್ಸವ ನಡೆಯಲಿದೆ. ಎ. 9ರ ಗುರುವಾರ ರಾತ್ರಿ 8ಗಂಟೆಗೆ ಕೊರಗಜ್ಜ ದೈವ ಹಾಗೂ ಹಲೇರ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.









error: Content is protected !!
Scroll to Top