ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್

ನವದೆಹಲಿ: ದೇಶದ ಆರು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿದ ಹಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ್ದಾರೆ.

ಕರ್ನಾಟಕ, ಕೇರಳ, ತಮಿಳುನಾಡು, ಒಡಿಶಾ, ಸಿಕ್ಕಿಂ, ಉತ್ತರಾಖಂಡಗಳಿಗೆ ನೂತನ ರಾಜ್ಯಪಾಲರುಗಳ ನೇಮಕವಾಗಿದೆ. ಕರ್ನಾಟಕದ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರನ್ನು ನೇಮಿಸಲಾಗಿದೆ.

ಸಿಕ್ಕಿಂನ ಹಾಲಿ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಕೇರಳಂ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕ‌ರ್ ಅವರಿಗೆ ತಮಿಳುನಾಡಿನ ಜವಾಬ್ದಾರಿ ವಹಿಸಲಾಗಿದೆ.

ಕರ್ನಾಟಕಕ್ಕೆ ಡಾ. ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ಜಾರ್ಖಂಡ್‌ನ ಹಿರಿಯ ನಾಯಕ ಬ್ರಜ್ ಮೋಹನ್ ರಾಮ್ ಅವರನ್ನು ಒಡಿಶಾ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಡಾ. ಸುಧಾ ಯಾದವ್ ಕರ್ನಾಟಕದ ರಾಜ್ಯಪಾಲರಾಗಲಿದ್ದಾರೆ. ಡಾ. ಧಲ್ ಸಿಂಗ್ ಬಿಸೇನ್ ಅವರಿಗೆ ಉತ್ತರಾಖಂಡದ ರಾಜ್ಯಪಾಲರ ಹೊಣೆಗಾರಿಕೆ ನೀಡಲಾಗಿದೆ. ಇನ್ನು ಓಂ ಪ್ರಕಾಶ್ ಮಾಥುರ್ ಅವರ ಸ್ಥಾನಕ್ಕೆ ದುಷ್ಯಂತ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.











































































error: Content is protected !!
Scroll to Top