ಎನ್‌ಡಿಎ ಪರೀಕ್ಷೆಯಲ್ಲಿ ಆಳ್ವಾಸ್‌ನ 10 ವಿದ್ಯಾರ್ಥಿಗಳು ಉತ್ತೀರ್ಣ

ಮೂಡುಬಿದಿರೆ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮತ್ತು ನೌಕಾ ಅಕಾಡೆಮಿ (ಎನ್‌ಎ) ಪ್ರವೇಶ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 10 ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಾದ ಪ್ರಣವ್ ಜಜ್ಜು, ವಿನಯ್ ಟಿ., ಓಂಕಾರ್ ರಾಜೇಶ್, ಅದ್ವೈತ್ ವಿಕ್ರಾಂತ್ ಶಿಂಧೆ, ವಿವೇಕ್ ಎ., ಅಮೋಘ್ ಎನ್. ಬಿ., ಎಂ. ಯೂಸುಫ್ ಎನ್. ಎಸ್., ಸಾಯೀಶ್ ಪಿ. ಟಿ., ಪ್ರಹ್ಲಾದ್ ಡಿ. ಡಿ. ಹಾಗೂ ಸಂಹಿತ್ ವಿ. ಆರ್. ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಎನ್‌ಡಿಎ ಪರೀಕ್ಷೆಯ ಸಿದ್ಧತೆಗಾಗಿ ಕಾಲೇಜಿನ ವತಿಯಿಂದ ವಿಶೇಷ ತರಬೇತಿ, ಅಣಕು ಪರೀಕ್ಷೆಗಳು ಹಾಗೂ ಮಾರ್ಗದರ್ಶನ ಕಾರ್ಯಾಗಾರಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಈ ಪರೀಕ್ಷೆಯ ಮೂಲಕ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಅವಕಾಶ ದೊರೆಯುತ್ತದೆ.

ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.







































































error: Content is protected !!
Scroll to Top