ಸಂಸ್ಕಾರದ ಹಿಂದೆ ಹೋದರೆ ಬಾಳು ಬಂಗಾರ: ಪ್ರೀತಿರೇಖಾ ಪ್ರಸನ್ನ

ನವರಾತ್ರಿಯ ಪ್ರಯುಕ್ತ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಕಾರ್ಕಳ : ಸಂಸ್ಕಾರದ ಹಿಂದೆ ಹೋದರೆ ಬಾಳು ಬಂಗಾರವಾಗಲಿದೆ. ಹಿಂದಿನ ಕಾಲದಲ್ಲಿ ಮಕ್ಕಳು ಮಾರ್ಕಿನ ಹಿಂದೆ ಹೋಗದೆ ಸಂಸ್ಕಾರವನ್ನು ತಮ್ಮದಾಗಿಸಿಕೊಂಡು ಬದುಕಿನಲ್ಲಿ ಯಶಸ್ಸನ್ನು ಗಳಿಸಿರುತ್ತಾರೆ. ಆಡಿ ಬಾ ನನ ಕಂದ ಕೈಕಾಲು ತೊಳೆದೇನು ಎನ್ನುತ್ತಿದ್ದ ತಾಯಂದಿರು ಇಂದು ಆಡಲು ಹೋದರೆ ಕೈಕಾಲು ಮುರಿದೇನು ಎನ್ನುವ ತನಕ ನಮ್ಮ ಸಂಸ್ಕಾರ ಬೆಳೆದಿದೆ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಕೋಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರೀತಿರೇಖಾ ಪ್ರಸನ್ನ ಆಚಾರ್ಯ ಹೇಳಿದರು.

ಅವರು ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ವತಿಯಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಜರುಗಿದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಮಹಿಳಾ ಮಂಡಳಿಯ ಕಾರ್ಯವೈಖರಿಯನ್ನು ಗಮನಿಸಿದರೆ ಇದು ಯಾವ ಶಾಲೆಗೂ ಕಡಿಮೆ ಇಲ್ಲ ಎಂದು ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ಕವಿತಾ ಹರೀಶ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ಐವರು ವಿದ್ಯಾರ್ಥಿಗಳಿಗೆ ದಾನಿಗಳ ಸಹಕಾರದೊಂದಿಗೆ ಧನಸಹಾಯವನ್ನು ಹಸ್ತಾಂತರಿಸಲಾಯಿತು. ನವರಾತ್ರಿ ಪ್ರಯುಕ್ತ ಜರುಗಿದ ಆಟೋಟ ಸ್ಪರ್ಧೆಯ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು. ಮಹಿಳಾ ಮಂಡಳಿ ವತಿಯಿಂದ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಸ್ಪರ್ಧೆ ನಡೆಯಿತು. ಐದು ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನವನ್ನು ಕಾರ್ಕಳದ ಚಿರಶ್ರೀ ತಂಡ, ದ್ವಿತೀಯ ಬಹುಮಾನವನ್ನು ಕುಳಾಯಿ ತಂಡದವರು ಪಡೆದರು.

ಮುಖ್ಯ ಅತಿಥಿಗಳು ಉಷಾ ಜ್ಯುವೆಲ್ಲರ್ಸ್ ಮಾಲಕರಾದ ಅಮಿತ್‌ ಅವರ ಪತ್ನಿ ಪ್ರಿಯಾಂಕ ಅಮಿತ್, ಕಾರ್ಕಳ ನ್ಯೂ ಪವನ್ ಜ್ಯುವೆಲ್ಲರ್ಸ್ ಪವನ್ ಆಚಾರ್ಯ, ಗೌರವ ಉಪಸ್ಥಿತಿಯಲ್ಲಿ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತಸರ ಪಿ. ರವಿ ಆಚಾರ್ಯ ಪೆರ್ವಾಜೆ, ಜೊತೆ ಮೊಕ್ತೇಸರ ಕೆ. ಸುರೇಶ್ ಆಚಾರ್ಯ ನಿಟ್ಟೆ, ಮತ್ತು ಪಿ. ವಸಂತ ಆಚಾರ್ಯ ಉಪಸ್ಥಿತರಿದ್ದರು.

ಗೌರವ ಸನ್ಮಾನ
ಮಾವೇದಾಸ್ ಫುಡ್ & ಸೀರಿಯಲ್ಸ್ ಪ್ರೈ.ಲಿ. ಹೊಸ ಆರಂಭಿಕ ಉದ್ಯಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರಮಟ್ಟದ ಉನ್ನತ ಗೌರವ ಪಡೆದ ಅನುಷಾ ಪ್ರಜ್ವಲ್ ಆಚಾರ್ ಹಾಗೂ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ನಿಕಟಪೂರ್ವ ಅಧ್ಯಕ್ಷರು ನಳಿನಿ ವಿಜೇಂದ್ರ ಅವರನ್ನು ಗೌರವಿಸಲಾಯಿತು.

ಪ್ರಾರ್ಥನೆಯನ್ನು ಸ್ನೇಹ ಸಂಪತ್‌ ನಿರ್ವಹಿಸಿ, ಕಾರ್ಯದರ್ಶಿ ಮಲ್ಲಿಕಾ ಗಣೇಶ್‌ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಗೀತಾ ಚಂದ್ರ ನಿರೂಪಿಸಿ, ಗೌರವಾಧ್ಯಕ್ಷೆ ಜ್ಯೋತಿ ರವಿ ವಂದಿಸಿದರು. ಮಹಿಳಾ ಮಂಡಳಿಯ ಪದಾಧಿಕಾರಿಗಳು ಸಹಕರಿಸಿದರು.











































































error: Content is protected !!
Scroll to Top