ಕುಟುಂಬಸ್ಥರ 25ನೇ ವರ್ಷದ ಚಂಡಿಕಾ ಯಾಗ, ಶರಧಿ ಅಭಿನಂದನಾ ಕೃತಿ ಬಿಡುಗಡೆ
ಕಾರ್ಕಳ: ಮುಂಬಯಿಯಲ್ಲಿ ಬದುಕು ಕಟ್ಟಿಕೊಂಡು ಮಹತ್ಸಾಧನೆಗೈದು ಪ್ರಸಿದ್ಧರಾದವರು ಶ್ಯಾಮ್ ಎನ್.ಶೆಟ್ಟಿಯವರು. ಉದ್ಯಮಿಯಾಗಿ, ಸಮಾಜ ಸೇವಕರಾಗಿ, ಸಂಘಟಕರಾಗಿ, ಚಲನಚಿತ್ರ ನಿರ್ಮಾಪಕರಾಗಿ, ದಾನಿಯಾಗಿ, ಕಲಾಪೋಷಕರಾಗಿ, ಧಾರ್ಮಿಕ ಚಿಂತಕರಾಗಿ ಸೇವೆ ಸಲ್ಲಿಸಿದವರು. ಕ್ಯಾಟರಿಂಗ್ ಉದ್ಯಮದಲ್ಲಂತೂ ಶ್ಯಾಮ್ ಎನ್.ಶೆಟ್ಟಿಯವರ ಸಾಹಸ, ಸಾಧನೆ ಅಮೋಘವಾದುದು. ತನ್ನ ಪ್ರಗತಿಯ ಜೊತೆಗೆ ಎಲ್ಲರ ಅಭ್ಯುದಯವನ್ನು ಬಯಸಿದವರು. ಶ್ಯಾಮ್ ಎನ್. ಶೆಟ್ಟಿಯವರಿಗೆ ಈಗ 75 ಸಂಭ್ರಮ. ಕಾರ್ಕಳದ ನಕ್ರೆ ಬಲಿಪಗುತ್ತು ಶ್ಯಾಮ್ ಎನ್.ಶೆಟ್ಟಿ 75ರ ಸಂಭ್ರಮವನ್ನು ಅ.17ರಂದು ಕಾರ್ಕಳ ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾನುಗ್ರಹ ಕಾಳಿಕಾ ಸನ್ನಿಧಿಯಲ್ಲಿ ಅಚರಿಸಲಾಗುವುದು.
ಬೆಳಗ್ಗೆ 10ರಿಂದ ನಕ್ರೆ ಬಲಿಪಗುತ್ತು ಶ್ಯಾಮ್ ಎನ್.ಶೆಟ್ಟಿ ಹಾಗೂ ಕುಟುಂಬಸ್ಥರ 25ನೇ ವರ್ಷದ ಚಂಡಿಕಾ ಯಾಗ, ಮಧ್ಯಾಹ್ನ 12ರಿಂದ ಪೂರ್ಣಾಹುತಿ, ಅನ್ನಸಂತರ್ಪಣೆ ಸೇವೆ ಜರುಗಲಿದೆ. ಮಧ್ಯಾಹ್ನ1ರಿಂದ ಶ್ಯಾಮ್ ಎನ್. ಶೆಟ್ಟಿ ಅಭಿಮಾನಿ ಬಳಗ ಹಾಗೂ ‘ಟೀಮ್ ಐಲೇಸಾ’ ಸಹಯೋಗದಲ್ಲಿ ನಕ್ರೆ ಬಲಿಪಗುತ್ತು ಶ್ಯಾಮ್ ಎನ್.ಶೆಟ್ಟಿಯವರ 75ರ ಸಂಭ್ರಮಕ್ಕಾಗಿ ಡಾ.ದಿನೇಶ್ ಶೆಟ್ಟಿ ರೆಂಜಾಳ ರಚಿತ ‘ಶರಧಿ’ ಅಭಿನಂದನಾ ಕೃತಿ ಲೋಕಾರ್ಪಣೆಗೊಳ್ಳಲಿದೆ.

ಗ್ರಂಥ ಲೋಕಾರ್ಪಣೆ ಮತ್ತು ಆಶೀರ್ವಚನವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ಕ್ಷೇತ್ರ ಶ್ರೀ ಗುರುದೇವಾನಂದ ಸ್ವಾಮೀಜಿ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳದ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಗೌರವ ಅತಿಥಿಗಳಾಗಿ ಮುನಿಯಾಲು ಉದಯಕೃಷ್ಣ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮುನಿಯಾಲು, ಕಾಪು ಹೊಸ ಮಾರಿಗುಡಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ, ಅಬುಧಾಬಿ ಉದ್ಯಮಿ ಸರ್ವೋತ್ತಮ ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ, ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ ಕಡಂದಲೆ ಪರಾರಿ, ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ಬೆಟ್ಟು ಬಾಳಿಕೆ, ಬೆಳಗಾವಿ ಬಂಟರ ಸಂಘ ಮತ್ತು ಪಡುಬಿದ್ರೆ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಉದ್ಯಮಿ, ಸಮಾಜ ಸೇವಕ ಗಣಪತಿ ಹೆಗ್ಡೆ ಬೋರ್ಕಟ್ಟೆ, ರಂಗಕರ್ಮಿ, ಕಟ್ಟಡ ನಿರ್ಮಾಪಕ ರಾಜೇಶ್ ರೆಂಜಾಳ, ಕಾರ್ಕಳದ ಉದ್ಯಮಿ ಗಣಪತಿ ಎಂ. ಪೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆಯ ಆಡಳಿತ ಮೊಕ್ತಸರ ಮುತ್ತಯ ನಾಯ್ಕ, ಉದ್ಯಮಿ, ಸಮಾಜ ಸೇವಕ ಶ್ರೀಧರ ಶೆಟ್ಟಿ ಅಲೆವೂರು ಅಭಿನಂದನ್, ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಖ್ಯ ಅರ್ಚಕ ರಮೇಶ್ ಭಟ್, ಕಾರ್ಕಳ ಚೇತನ ವಿಶೇಷ ಶಾಲೆಯ ಸಂಚಾಲಕ ರಘುನಾಥ್ ಎಸ್.ಶೆಟ್ಟಿ, ಕಾರ್ಕಳ ತಾಲೂಕು ಮಹಿಳಾ ಬಂಟರ ಸಂಘದ ಸ್ಥಾಪಕಾಧ್ಯಕ್ಷೆ ಜ್ಯೋತಿ ಎಸ್.ಶೆಟ್ಟಿ ಉಪಸ್ಥಿತಲಿರುವರು.
ಗ್ರಂಥ ಪರಿಚಯವನ್ನು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳದ ಕನ್ನಡ ವಿಭಾಗದ ಮುಖ್ಯಸ್ಥೆ, ಉಪನ್ಯಾಸಕಿ ವನಿತಾ ಶೆಟ್ಟಿ ಮಾಡಲಿದ್ದಾರೆ. ವೀರಯೋಧ ಪ್ರವೀಣ್ ಶೆಟ್ಟಿ, ಕಂಬಳ ಕ್ಷೇತ್ರದ ಜಯಕರ ಮಡಿವಾಳ, ನಾಟಿವೈದ್ಯ ವಿಜಯ್ ಶೆಟ್ಟಿ ನಕ್ರೆ ಪಾದೆಮನೆ, ಆಟೋ ಚಾಲಕ ಸುಂದರ ಶೆಟ್ಟಿಗಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮದಲ್ಲಿ ‘ಟೀಮ್ ಐಲೇಸಾ’ ಮುಂಬಯಿ ಮತ್ತು ಬೆಂಗಳೂರಿನ ಪ್ರಸಿದ್ಧ ಕಲಾವಿದರಿಂದ ಸಂಗೀತ, ನೃತ್ಯ ವೈಭವ ಜರುಗಲಿದೆ.





































