ಉಡುಪಿ ಜ್ಞಾನಸುಧಾ – ಜ್ಞಾನ ಸಂಭ್ರಮ 2025

ಉಡುಪಿ : ಶಿಕ್ಷಣವು ದೇಶದ ಬದಲಾವಣೆಯ ಬಹುಮುಖ್ಯ ಅಸ್ತ್ರ. ದೇಶದ ಭವಿಷ್ಯವೇ ವಿದ್ಯಾರ್ಥಿಗಳು. ಅಂತಹ ಶ್ರೇಷ್ಠ ವಿದ್ಯಾರ್ಥಿಗಳನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಈ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರ ಬದ್ಧತೆ, ಕಾಯಕ ನಿಷ್ಠೆ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ. ಇಂತಹ ಸಂಸ್ಥೆ ನನ್ನ ಕ್ಷೇತ್ರದಲ್ಲಿರುವುದು ನನ್ನ ಹೆಮ್ಮೆ. ಈ ಸಂಸ್ಥೆಯಿಂದ ಇನ್ನಷ್ಟು ಸಾಧಕರು ಮೂಡಿಬರಲಿ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಭಿಪ್ರಾಯ ಪಟ್ಟರು. ಅವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಉಡುಪಿ ಜ್ಞಾನ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಜ್ವಲ್‌ ಕನ್‌ಸ್ಟ್ರಕ್ಷನ್ ಮತ್ತು ಡೆವಲರ್ಸ್‌ ಪುರುಶೋತ್ತಮ್ ಪಿ. ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳ ಮೊಗದ ನಗುವೆ ತಮ್ಮ ಆಸ್ತಿ ಎಂಬ ಭಾವನೆ ಶಿಕ್ಷಕರಲ್ಲಿರಲಿ. ನಮ್ಮ ಸುಖ ಬೇರೆಯವರ ದುಃಖಕ್ಕೆ ಕಾರಣವಾಗದಿರಲಿ. ಜನ್ಮದಾತರ ಸಂತೋಷಕ್ಕೆ ಕಾರಣರಾಗಿ ಮತ್ತು ಸಮಯದ ಜೊತೆಗೆ ಸಾಗಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅಭಿನಂದನೆ
2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ಸಾಧಕರು, ಕೆ.ಸಿ.ಟಿ. ಪರೀಕ್ಷೆಯಲ್ಲಿ ಸಾವಿರದೊಳಗಿನ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳು, ನೀಟ್ ಪರೀಕ್ಷೆಯಲ್ಲಿ 500ಕ್ಕಿಂತ ಅಧಿಕ ಅಂಕ ಪಡೆದ ಸಾಧಕರು, ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಮತ್ತು ಸಾಂಸ್ಕೃತಿಕ ಸಾಧಕರನ್ನು ಅಭಿನಂದಿಸಲಾಯಿತು.

ಈ ಸಂದರ್ಭ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್‌ ಅಕಾಡೆಮಿಕ್ಸ್ ಡಾ. ಮಿಥುನ್‌ ಯು., ವಿದ್ಯಾರ್ಥಿ ನಾಯಕರಾದ ಆರ್ಯ ಎಂ. ಮತ್ತು ಆರ್ನವಿ ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೋತ್ಸ್ನಾ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲರಾದ ಪ್ರಕಾಶ್‌ ಜೋಗಿ ವಂದಿಸಿದರು.









































error: Content is protected !!
Scroll to Top