ಕಾರ್ಕಳ : ಸ್ಯಾಕ್ಸೋಫೋನ್ ವಾದನದಲ್ಲಿ ವಿಶೇಷ ಸಾಧನೆ ಮಾಡಿರುವ 2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾರ್ಕಳ ಅನಂತಶಯನ ತೋಟದ ಮನೆಯ ಪಾಂಡು ದೇವಾಡಿಗ ಅವರನ್ನು ಕಾರ್ಕಳ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ನೆರವೇರಿಸಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್, ಪಾಂಡು ದೇವಾಡಿಗರ ಸಾಧನೆಗೆ ಇನ್ನಷ್ಟು ಪ್ರಶಸ್ತಿಗಳು ಅರಸಿ ಬರಲಿ, ಶಿಷ್ಯ ವೃಂದ ಇನ್ನಷ್ಟು ಸಂಖ್ಯೆಯಲ್ಲಿ ಹೆಚ್ಚಾಗಿ ಕಲೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ನಿರಂಜನ್ ಜೈನ್, ತಾಲೂಕು ಬಿಜೆಪಿ ಉಪಾಧ್ಯಕ್ಷ ಅನಂತಕೃಷ್ಣ ಶೆಣೈ, ತಾಲೂಕು ವಕ್ತಾರ ರವೀಂದ್ರ ಮೊಯಿಲಿ, ಪುರಸಭಾ ಮಾಜಿ ಉಪಾಧ್ಯಕ್ಷ ಟಿ. ಗಿರಿಧರ್ ನಾಯಕ್, ಬಿಜೆಪಿಯ ಹಿರಿಯರಾದ ಪ್ರಕಾಶ್ ರಾವ್, ಪುರಸಭಾ ಸದಸ್ಯರಾದ ಪ್ರದೀಪ್ ರಾಣೆ, ಮಮತಾ, ನಗರ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಪ್ರಸಾದ್, ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ಯ, ವಾರ್ಡ್ ಅಧ್ಯಕ್ಷ ಧೀರಜ್ ರಾವ್, ಪುರಸಭಾ ಮಾಜಿ ಸದಸ್ಯರಾದ ಸುನಿಲ್ ಕೋಟ್ಯಾನ್, ಅವಿನಾಶ್ ಶೆಟ್ಟಿ, ತೋಟದ ಮನೆಯ ನಿವಾಸಿಗಳು ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡು ದೇವಾಡಿಗರಿಗೆ ಕಾರ್ಕಳ ಬಿಜೆಪಿಯಿಂದ ಸನ್ಮಾನ






























































