ಕಾರ್ಕಳ : ವಾದ್ಯ ಕಲಾ ಸೇವೆಗಾಗಿ 2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಕಾರ್ಕಳದ ಪಾಂಡು ದೇವಾಡಿಗ ಅವರನ್ನು ಶ್ರೀ ಕ್ಷೇತ್ರ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 40 ವರ್ಷಗಳಿಂದ ನೀಡುತ್ತಿರುವ ಸೇವೆಗಾಗಿ ದೇವಳದ ಆಡಳಿತ ಮಂಡಳಿಯ ಪರವಾಗಿ ಕ್ಷೇತ್ರದ ದೀಪೋತ್ಸವದಂದು ಸನ್ಮಾನಿಸಲಾಯಿತು. ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರ ಗಿರೀಶ್ ರಾವ್, ಮೊಕ್ತೇಸರರಾದ ಸುಧೀಂದ್ರ ರಾವ್, ದಯಾನಂದ ರಾವ್, ರಾಮಚಂದ್ರ ರಾವ್ ಹಾಗೂ ತಾನೋಜಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಡು ದೇವಾಡಿಗರಿಗೆ ಸನ್ಮಾನ
































































