ಅನಂತಶಯನ ತೆಳ್ಳಾರು ರಸ್ತೆಯ ಅವಾಂತರ – ಬ್ಯಾನರ್ ಅಳವಡಿಸಿ ಕಾಳಜಿ ಮೆರೆದ ರಿಕ್ಷಾ ಚಾಲಕ

ಕಾರ್ಕಳ : ಅನಂತಶಯನದಿಂದ ತೆಳ್ಳಾರಿನತ್ತ ಸಾಗುವ ರಸ್ತೆಯ ಪರಿಸ್ಥಿತಿ ಹೇಳತೀರದು. ತೀರಾ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿರುವುದಲ್ಲದೆ ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಈ ರಸ್ತೆಯಲ್ಲಿ ಸಂಚರಿಸುವವರು ಹಿಡಿ ಶಾಪ ಹಾಕುತ್ತಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಸಾರ್ವಜನಿಕರು, ಮಾಧ್ಯಮದವರು ಈ ರಸ್ತೆಯ ಅವಾಂತರದ ಬಗ್ಗೆ ಆಡಳಿತ ವ್ಯವಸ್ಥೆಯ ಗಮನಕ್ಕೆ ತರುತ್ತಲೇ ಇದ್ದಾರೆ. ಆದರೂ ಶಾಶ್ವತ ಪರಿಹಾರದ ಬದಲು ತಾತ್ಕಾಲಿಕವಾಗಿಯೂ ಸರಿಯಾದ ಪರಿಹಾರ ದೊರೆತಿಲ್ಲ.

ಬ್ಯಾನರ್‌ ಅಳವಡಿಕೆ
ಇದೀಗ ರಸ್ತೆ ಅವಾಂತರದಿಂದ ಬೆಸತ್ತ ರಿಕ್ಷಾ ಚಾಲಕ ದಿನೇಶ್‌ ಪೂಜಾರಿ (ಆಪು) ಅವರು ಹೊಂಡ ಗುಂಡಿಗಳಿಂದ ಕೂಡಿದ ಈ ರಸ್ತೆಯ ಬಗ್ಗೆ ಎಚ್ಚರಿಕೆಯ ಬ್ಯಾನರ್‌ವೊಂದನ್ನು ಅಳವಡಿಸಿದ್ದಾರೆ. ಬ್ಯಾನರ್‌ನಲ್ಲಿ ಗರ್ಭಿಣಿ ಸ್ತ್ರೀಯರು, ಹಿರಿಯರು ಈ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿ ಎಂದಿದೆ. ಇದು ಒಮ್ಮೆಗೆ ನೋಡುವವರಿಗೆ ಹಾಸ್ಯಾಸ್ಪದ ಎನ್ನುವಂತೆ ಕಂಡರೂ ಈ ರಸ್ತೆಯಲ್ಲಿ ಸಂಚರಿಸುವ ವಾಸ್ತವ ಪರಿಸ್ಥಿತಿ ಇದೇ ರೀತಿಯಿದೆ. ಆರೋಗ್ಯವಂತರೂ, ಸಾಮಾನ್ಯ ಜನತೆ ದಿನನಿತ್ಯ ಈ ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸಿದ್ದಲ್ಲಿ ನೋವು, ಉಳುಕು ಅಥವಾ ವಾಹನಗಳಿಗೆ ಡ್ಯಾಮೇಜ್‌ ಮತ್ತಿತರ ಸಮಸ್ಯೆಗಳನ್ನು ಎದುರಿಸುವಂತಾಗಿದೆ.





























































































































error: Content is protected !!
Scroll to Top