ಕಾರ್ಕಳ : ಯೂತ್ ಬಿಲ್ಲವ ರಿ. ಕಾರ್ಕಳ ಸಂಘಟನೆಯ ನೇತೃತ್ವದಲ್ಲಿ ಸೆ. 7ರಂದು ಕೋಟಿ ಚೆನ್ನಯ ಥೀಮ್ ಪಾರ್ಕ್ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಲ್ ಮಾತನಾಡಿ ನಾರಾಯಣ ಗುರುಗಳ ಜೀವನ ತತ್ವಾದರ್ಶಗಳ ಕುರಿತು ವಿವರಿಸಿದರು. ಈ ಸಂದರ್ಭ ಯೂತ್ ಬಿಲ್ಲವ ಸಂಘಟನೆಯ ಅಧ್ಯಕ್ಷ ಸುಕೇಶ್ ಕರ್ಕೇರ, ಉಪಾಧ್ಯಕ್ಷ ರವಿರಾಜ್ ಪೂಜಾರಿ, ಕಾರ್ಯದರ್ಶಿ ಪ್ರಮೀತ್ ಸುವರ್ಣ, ಕೋಶಾಧಿಕಾರಿ ಶರತ್ ಪೂಜಾರಿ ಬೈಲಡ್ಕ, ಸಂಘದ ಪದಾಧಿಕಾರಿಗಳು, ಸದಸ್ಯರು, ಯಕ್ಷರಂಗಾಯಣದ ಸದಸ್ಯರು ಹಾಗೂ ಪ್ರವಾಸಿಗರು ಉಪಸ್ಥಿತರಿದ್ದರು.
ಯೂತ್ ಬಿಲ್ಲವ – ನಾರಾಯಣಗುರು ಜಯಂತಿ ಆಚರಣೆ






























































