ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ವಾರ್ಷಿಕ ಮಹಾಸಭೆ

ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ವಾರ್ಷಿಕ ಮಹಾಸಭೆ ಜು. 6ರಂದು ದೇವಸ್ಥಾನದ ಶ್ರೀ ನಾಗಧರ್ಮೇಂದ್ರ ಸಭಾಂಗಣದಲ್ಲಿ ಜರುಗಿತು. ಕಟಪಾಡಿ ವೇಣುಗಿರಿ ಶ್ರೀಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮುರಹರಿ ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಂಘಟನೆಯಿಂದ ವಿಭಜನೆಯಿಲ್ಲ, ಸಂಘಟಿತರಾಗಿ ಕಾರ್ಯನಿರ್ವಹಿಸಿದಾಗ ಸಮಾಜದ ಅಭಿವೃದ್ಧಿ ಸಾಧ್ಯ.
ಸಮಾಜಮುಖಿ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ದೊರೆಯುವ ಆತ್ಮಸ್ಥೈರ್ಯ ಇತರರಿಗೂ ಮಾದರಿ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಮಾತನಾಡಿ, ಕಳೆದ ಐದು ವರ್ಷದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಲುಕು ಹಾಕಿದ ಅವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ದೇವಸ್ಥಾನದ ಅಂಗಸಂಸ್ಥೆಗಳಾದ ಮಹಿಳಾ ಮಂಡಳಿ, ಭಜನಾ ಸೇವಾ ಸಮಿತಿ ಮತ್ತು ಸಮಾಜದ ಇತರೆ ಸಂಸ್ಥೆಗಳು ಹಾಗೂ 52 ಕೂಡುವಳಿಕೆ ಗ್ರಾಮ ಮೊಕ್ತೇಸರರ ಸಹಕಾರ ಮಹತ್ತರವಾದುದು. ದೇವಸ್ಥಾನಕ್ಕೆ ಸಂಬಂಧಪಟ್ಟ 32 ಸೆಂಟ್ಸ್‌ ಜಾಗದ ಗಡಿಗುರುತು ಮಾಡಿ ದೇವಸ್ಥಾನದ ಸುಪರ್ದಿಗೆ ಒಪ್ಪಿಸಿದ್ದು, 38 ಸೆಂಟ್ಸ್‌ ಪಟ್ಟಾ ಜಾಗವನ್ನು ವಾಣಿಜ್ಯ ಕನ್ವರ್ಶನ್‌ ಮಾಡಿ ಸಮುದಾಯ ಭವನದ ನಿರ್ಮಾಣಕ್ಕಾಗಿ ಪುರಸಭೆಯಿಂದ ಅನುಮತಿಯನ್ನು ಪಡೆದಿರುವುದಾಗಿ ತಿಳಿಸಿದರು. ಇದಕ್ಕೆ ಸಂಪೂರ್ಣ ಸಹಕಾರ ನೀಡಿದ ಆಡಳಿತ ಮಂಡಳಿ, ಸಲಹಾ ಸಮಿತಿ ಮತ್ತು ಕಲ್ಲೊಟ್ಟೆ ಸತೀಶ್‌ ಆಚಾರ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ವಿಠಲ್‌ ಪುರೋಹಿತ್‌ ಪ್ರಾರ್ಥಿಸಿದರು. ಜೊತೆ ಮೊಕ್ತೇಸರರಾದ ಪಿ. ರವಿ ಆಚಾರ್ಯ ವರದಿ ವಾಚಿಸಿ, ನಿಟ್ಟೆ ಸುರೇಶ್‌ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ವಿಶ್ವನಾಥ್‌ ಆಚಾರ್ಯ ನಿರೂಪಿಸಿ, ಮಾಜಿ ಮೊಕ್ತೇಸರರಾದ ಕಟ್ಟೆಮಾರ್‌ ರತ್ನಾಕರ ಆಚಾರ್ಯ ವಂದಿಸಿದರು. ಸಲಹಾ ಸಮಿತಿ ಸದಸ್ಯರು, ಕಾಳಿಕಾಂಬಾ ಭಜನಾ ಸಮಿತಿ, ಕಾಳಿಕಾಂಬಾ ಡೆವಲಪ್‌ಮೆಂಟ್ ಟ್ರಸ್ಟ್‌, ವಿಶ್ವಕರ್ಮ ಮಹಿಳಾ ಮಂಡಳಿ, ಕಾಳಿಕಾಂಬಾ ವಿಶ್ವಕರ್ಮ ಫೈನಾನ್ಸ್‌, ಚಿನ್ನ ಬೆಳ್ಳಿ ಕೆಲಸಗಾರರ ಸಂಘ, ವಿಭಿಎಸ್‌ ಸಭಾ, ಮರದ ಕೆಲಸಗಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



















































































error: Content is protected !!
Scroll to Top