ಕಾರ್ಕಳ : ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನ ಡಿಪಾರ್ಟ್ಮೆಂಟ್ ಆಫ್ ಕಾರ್ಡಿಯೋ ವ್ಯಾಸ್ಕುಲರ್ ಟೆಕ್ನಾಲಜಿ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಕಾರ್ಕಳ ಜೋಡುರಸ್ತೆ ಸಮೀಪದ ತುಂಬೆಹಿತ್ಲುವಿನ ಶ್ರೀದೇವಿ ಪ್ರಭು ಅವರಿಗೆ ಮಾಹೆ ವಿಶ್ವವಿದ್ಯಾಲಯ ಡಾಕ್ಟರೇಟ್ (ಪಿ.ಎಚ್.ಡಿ.) ಪದವಿ ಪ್ರದಾನ ಮಾಡಿದೆ.
ಇವರು ಡಾ. ಟೋಮ್ ದೇವಾಸಿಯಾ, ಡಾ. ಅನ್ನಪೂರ್ಣ ಹಾಗೂ ಡಾ. ಕೃಷ್ಣಾನಂದ ನಾಯಕ್ ಅವರ ಮಾರ್ಗದರ್ಶನದಲ್ಲಿ Effect of yoga therapy-pranayama, meditation and relaxation on quality of life and functional outcome in heart failure patients on optimal medical management ವಿಷಯದ ಮೇಲೆ ಸಂಶೋಧನೆ ಮಾಡಿ ಪ್ರಬಂಧ ಮಂಡಿಸಿರುತ್ತಾರೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಎಂಬಿಎ ವಿಭಾಗದ ಹಿರಿಯ ಉಪನ್ಯಾಸಕ ಸಂತೋಷ್ ಪ್ರಭು ಅವರ ಪತ್ನಿಯಾಗಿರುವ ಇವರು ರಮೇಶ್ ಪ್ರಭು ಮತ್ತು ರಾಧಾ ದಂಪತಿ ಪುತ್ರಿ.




























































