ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆ ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆ ಫಲಿತಾಂಶ ಜು. 6ರಂದು ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಕಾಲೇಜಿನ 11 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳಾದ ಪೂರ್ಣ ಭಟ್ ಕೆ. ಎಲ್. (264), ಸೃಜನ್ ಎಸ್. ಭಟ್ (249), ಅಫ್ಸರ್ ಫಾಹಿಮ್ (238), ಬಸವ ಪ್ರಸಾದ್ ಕಾಜಿ (238), ಪ್ರಭವ್ ಗೋಪಾಲ್ ಶೆಟ್ಟಿ (233), ಸೌರವ್ ರವಿ ಶೇಟ್ (225), ಆರ್ಯ ಬಿ.ವಿ. (212), ಹೆಗ್ಡೆ ಪ್ರತ್ವಿಕ್ (212), ಶ್ರದ್ಧಾ ಪ್ರಕಾಶ್ ಅಂಗಡಿ (210), ರೇಷ್ಮ ಜಿ.ಕೆ. (204), ಶ್ರೀಕಾರ್ ದುಬೀರ (202) ಅಂಕ ಗಳಿಸಿದ್ದಾರೆ. ಪರೀಕ್ಷೆ ಬರೆದಿರುವ ಸಂಸ್ಥೆಯ 20 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಅರ್ಹತೆ ಗಳಿಸಿರುತ್ತಾರೆ. ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಬೋಧಕೇತರ ವೃಂದದವರು ಹಾಗೂ ಪರೀಕ್ಷಾ ಸಂಯೋಜಕ ರಾಘವೇಂದ್ರ ಬಿ. ರಾವ್ ಅಭಿನಂದಿಸಿದ್ದಾರೆ.
ಸಿಎ ಫೌಂಡೇಶನ್ – ಕ್ರಿಯೇಟಿವ್ ಕಾಲೇಜಿನ 11 ವಿದ್ಯಾರ್ಥಿಗಳು ತೇರ್ಗಡೆ







































