ಉಡುಪಿ : ಬಾಕಿ ಉಳಿದಿದ್ದ 10 ಜಿಲ್ಲಾ ಘಟಕಗಳ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಾಗಿ ಕುತ್ಯಾರು ನವೀನ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
2025ರ ಜನರವರಿಯಲ್ಲಿ 23 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಇದೀಗ ದೇಶದಾದ್ಯಂತ ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಎರಡನೇ ಹಂತದಲ್ಲಿ ಉಳಿದಿರುವ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ.
ಬಿಜೆಪಿ ನೂತನ ಜಿಲ್ಲಾಧ್ಯಕ್ಷರು
ಮೈಸೂರು ಗ್ರಾಮಾಂತರ – ಕೆ. ಎನ್. ಸುಬ್ಬಣ್ಣ.
ಹಾಸನ – ಸಿದ್ದೇಶ್ ನಾಗೇಂದ್ರ.
ಕೊಡಗು – ರವಿ ಕಾಳಪ್ಪ
ಉಡುಪಿ – ಕುತ್ಯಾರು ನವೀನ್ ಶೆಟ್ಟಿ
ದಾವಣಗೆರೆ – ಎನ್. ರಾಜಶೇಖರ
ಹಾವೇರಿ – ವಿರೂಪಾಕ್ಷಪ್ಪ ಬಳ್ಳಾರಿ
ಚಿತ್ರದುರ್ಗ – ಕೆ. ಟಿ. ಕುಮಾರಸ್ವಾಮಿ
ತುಮಕೂರು – ಎಚ್. ಎಸ್. ರವಿಕುಮಾರ್ (ಹೆಬ್ಬಾಕ)
ಮಧುಗಿರಿ – ಚಿದಾನಂದ ಗೌಡ
ಚಿಕ್ಕಬಳ್ಳಾಪುರ – ಎಸ್. ವಿ. ರಾಮಚಂದ್ರ ಗೌಡ (ಸೀಕಲ್)
































































