ಬಂಡಿಮಠ ಮನೆಯ ಟೆರೆಸ್‌ನಲ್ಲಿ ಚಿರತೆ ಪ್ರತ್ಯಕ್ಷ

ಕಾರ್ಕಳ : ಬಂಡಿಮಠದಲ್ಲಿ ಜೂ. 11ರ ರಾತ್ರಿ ವಿನಯ ಭಟ್‌ ಎಂಬವರ ಮನೆಯ ಟೆರೆಸ್‌ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಪಕ್ಕದ ಮನೆಯವರು ಕರೆ ಮಾಡಿ ಟೆರೆಸ್‌ನಲ್ಲಿ ಚಿರತೆ ಇರುವ ಬಗ್ಗೆ ತಿಳಿಸಿದ್ದು, ಟೆರೆಸ್‌ನ ಲೈಟ್‌ ಆನ್‌ ಮಾಡಿದಾಗ ಚಿರತೆ ಅಲ್ಲಿಂದ ಪರಾರಿಯಾಗಿದೆ. ಕಾರ್ಕಳ ನಗರದಲ್ಲಿ ಚಿರತೆ ಹಾವಳಿ ಕಂಡುಬರುತ್ತಿದ್ದು ನಗರ ನಿವಾಸಿಗಳನ್ನು ಆತಂಕ್ಕಕೀಡು ಮಾಡಿದೆ. ಬಂಡಿಮಠ ಸುತ್ತಮತ್ತ ನಾಯಿಗಳು ಕಣ್ಮರೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದು ಚಿರತೆಯೇ ನಾಯಿಗಳನ್ನು ಬಲಿಪಡೆಯುತ್ತಿದೆ ಎಂದು ಹೇಳುತ್ತಾರೆ.





























































































































error: Content is protected !!
Scroll to Top