ಕಾಂತಾರ ಚಾಪ್ಟರ್‌ 1 ಕಲಾವಿದ ವಿಜು ವಿ.ಕೆ. ಹೃದಯಾಘಾತಕ್ಕೆ ನಿಧನ

ತೀರ್ಥಹಳ್ಳಿ : ಕಾಂತಾರ ಚಾಪ್ಟರ್‌ 1 ಸಿನಿಮಾ ಶೂಟಿಂಗ್‌ಗೆ ಬಂದಿದ್ದ ಕೇರಳ ತ್ರಿಶೂರ್‌ ಮೂಲದ ಕಲಾವಿದ ವಿಜು ವಿ. ಕೆ. ಬುಧವಾರ ಹೃದಯಾಘಾತಕ್ಕೆ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ಸಮೀಪದ ಆಗುಂಬೆ ಹೋ ಸ್ಟೇ ಒಂದರಲ್ಲಿ ತಂಗಿದ್ದ ಅವರಿಗೆ ಬುಧವಾರ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಈ ವೇಳೆಗಾಗಲೇ ವಿಜು ಅವರು ಸಾವನ್ನಪ್ಪಿದ್ದರು.





























































































































error: Content is protected !!
Scroll to Top