ಡಾ. ಮಂಜುನಾಥ್ ಎ. ಕೋಟ್ಯಾನ್ ಮ್ಯಾರಥಾನ್ಗೆ ಚಾಲನೆ
ಕಾರ್ಕಳ : ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ರನ್ ಫಾರ್ ಗ್ರೀನ್ ಹೆಸರಿನಲ್ಲಿ ಭಾನುವಾರ ಮ್ಯಾರಥಾನ್ ನಡೆಯಿತು. ಶ್ರೀ ಭುವನೇಂದ್ರ ವಸತಿ ಶಾಲೆಯ ಕಾರ್ಯದರ್ಶಿ ಡಾ. ಮಂಜುನಾಥ್ ಎ. ಕೋಟ್ಯಾನ್ ಕಾರ್ಕಳ ಬಸ್ ನಿಲ್ದಾಣದಲ್ಲಿ ಓಟಕ್ಕೆ ಚಾಲನೆ ನೀಡಿದರು.

ಮ್ಯಾರಥಾನ್‌ನಲ್ಲಿ ಭುವನೇಂದ್ರದ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರು, ಕಾರ್ಕಳದ 20ಕ್ಕೂ ಹೆಚ್ಚು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾರೋಪ
ಶ್ರೀ ಭುವನೇಂದ್ರ ಕಾಲೇಜಿನ ಎಸ್.ಆರ್. ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಕಳ ನಗರ ಪೊಲೀಸ್ ಠಾಣೆ ಎಸ್‌ಐ ಸಂದೀಪ್ ಕುಮಾರ್ ಶೆಟ್ಟಿ, ಶೈಕ್ಷಣಿಕ ಸಾಧನೆ ಮೂಲಕ ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಗೆ ಕೀರ್ತಿ ತರಬೇಕೆಂದರು. ಶಾಲಾ ಸಂಚಾಲಕ ಕೆ. ವೆಂಕಟೇಶ್ ಪ್ರಭು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ. ಕೆ. ವಿಫುಲ್ ತೇಜ್, ಪೋಷಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಪ್ರಮೀಳಾ ಕೋಟ್ಯಾನ್ ಸ್ವಾಗತಿಸಿ, ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು, ಶೋಭಾ ಶೆಟ್ಟಿ ಪ್ರಶಸ್ತಿ ಪುರಸ್ಕ್ರತರ ಪಟ್ಟಿ ವಾಚಿಸಿದರು. ಪ್ರಕೃತಿ ವಂದಿಸಿದರು.
ನಿಟ್ಟೆ ತಂಡ ಪ್ರಥಮ
ನಿಟ್ಟೆ ಎನ್. ಎಸ್. ಎ. ಎಂ ತಂಡ ಓವರ್ ಆಲ್ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. ಆತಿಥೇಯ ಎಸ್. ಬಿ. ಆರ್. ಎಸ್ ಸಂಸ್ಥೆಯು ರನ್ನರಪ್ ಆಗಿ ಹೊರಹೊಮ್ಮಿತ್ತು.






























































