ಬೈಕ್‌ ಹಿಂಬದಿಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ – ವೀಡಿಯೋ ವೈರಲ್‌

ಬೈಂದೂರು : ಬೈಕಿನ ಹಿಂಬದಿಗೆ ಸರಪಳಿಯಿಂದ ನಾಯಿಯನ್ನು ಕಟ್ಟಿ ಎಳೆದೊಯ್ಯುತ್ತಿರುವ ರಾಕ್ಷಸೀಯ ಕೃತ್ಯ ಬೈಂದೂರಿನಲ್ಲಿ ಕಂಡುಬಂದಿದೆ. ಬೈಂದೂರು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವ್ಯಕ್ತಿಯೊರ್ವ ತನ್ನ ಸಾಕು ನಾಯಿಯನ್ನು ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಕಟ್ಟಿ ಸುಮಾರು 2 ಕಿ.ಮೀ. ದೂರದವರೆಗೆ ಎಳೆದೊಯ್ದಿದ್ದಾನೆ. ಈ ದೃಶ್ಯವನ್ನು ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ರೀತಿ ನಾಯಿಯನ್ನು ಎಳೆದೊಯ್ಯುತ್ತಿರುವುದನ್ನು ಪ್ರಶ್ನಿಸಿದ ಸಾರ್ವಜನಿಕರಿಗೆ, ನಾನು ಮನೆಯಲ್ಲಿ ಸಾಕಿದ ನಾಯಿ ನೀವ್ಯಾರು ಕೇಳುವವರು ? ಎಂಬ ಉದ್ದಟತನ ಉತ್ತರ ನೀಡಿದ್ದಾನೆ ಎನ್ನಲಾಗಿದೆ. ಈತ ಬೈಂದೂರು ಭಾಗದ ಪಡುವರಿ ನಿವಾಸಿ ಎಂದು ತಿಳಿದುಬಂದಿದೆ. ಗಾಯವಾಗಿ ರಸ್ತೆಯ ಮೇಲೆ ಬಿದ್ದಿರುವ ನಾಯಿಯನ್ನು ನೋಡಿದವರು ತರಾಟೆಗೆತ್ತಿಕೊಂಡಿದ್ದಾರೆ.





























































































































error: Content is protected !!
Scroll to Top