ನನಗೆ ಅಪಘಾತ ಆಗಿದ್ದರಿಂದ ಗೃಹಲಕ್ಷ್ಮೀ ಯೋಜನೆಗೆ ವಿಳಂಬ : ಶೀಘ್ರದಲ್ಲೇ ಕಂತು ಬಿಡುಗಡೆಯಾಗಲಿದೆ – ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಕಂತು ಬಿಡುಗಡೆ ವಿಳಂಬಕ್ಕೆ ರಾಜ್ಯದಾದ್ಯಂತ ಟೀಕೆ ಕೇಳಿಬರುತ್ತಿದೆ. ಹಲವೆಡೆ 3 ತಿಂಗಳಿಂದ ಇನ್ನು ಕೆಲವೆಡೆ 4 ತಿಂಗಳಿಂದ ಕಂತು ಬಿಡುಗಡೆಯಾಗಿಲ್ಲ. ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನನಗೆ ಅಪಘಾತ ಆದ್ಮೇಲೆ 3 ತಿಂಗಳು ಗೃಹಲಕ್ಷ್ಮೀ ಯೋಜನೆ ವಿಳಂಬ ಆಗಿದೆ. ಇಲ್ಲದಿದ್ದರೆ ಹಣಕಾಸು ಇಲಾಖೆಗೆ ಪದೇ ಪದೇ ಒತ್ತಡ ಹಾಕುತ್ತೇವೆ. ಮಹಿಳೆಯರಿಗೆ ಗೃಹಲಕ್ಷ್ಮೀ ಕಂತು ಬಿಡುಗಡೆ ವಿಳಂಬ ಮಾಡಿದರೆ ತೊಂದರೆಯಾಗುತ್ತೆ ಅಂತ ಪದೇ ಪದೇ ಜ್ಞಾನಪಿಸುತ್ತಿದ್ದೆ. ಇಲಾಖೆಗೆ ಹೋಗ್ತಿದ್ದೆ, ಭೇಟಿ ಕೊಡ್ತಿದ್ದೆ, ಸಿಎಂ ಗಮನಕ್ಕೆ ತಂದು ಮನವಿ ಮಾಡುತ್ತಿದ್ದೆ. ಆದರೆ ದುರ್ದೈವ ಅಪಘಾತವಾಗಿ 40 ದಿನ ಚಿಕಿತ್ಸೆಗೆ ಒಳಗಾಗಿದ್ದರಿಂದ ಯೋಜನೆಗೆ ಸ್ವಲ್ಪ ಕುಂಠಿತವಾಗಿದೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮಿಯರು ಆತಂಕಪಡುವ ಅಗತ್ಯವಿಲ್ಲ, ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಹೋಗುತ್ತಿರುವೆ. ಎಲ್ಲಾ ಗೃಹಲಕ್ಷ್ಮೀಯರಿಗೂ ಮೂರು ತಿಂಗಳ ದುಡ್ಡು ಹಾಕುವ ಪ್ರಯತ್ನ ಮಾಡಿಸುತ್ತೇನೆ. ಮೊದಲು ಹಣ ಬಿಡುಗಡೆ ಮಾಡುತ್ತಿದ್ದ ರೀತಿಗೂ, ಈಗ ಬಿಡುಗಡೆ ಮಾಡುವುದಕ್ಕೂ ಸ್ವಲ್ಪ ವ್ಯತ್ಯಾಸ ಇದೆ, ಆದರೆ ಗೊಂದಲ ಈಗ ಇಲ್ಲ, ಎಲ್ಲವೂ ಕ್ಲಿಯರ್ ಆಗಿದೆ. ಬೇರೆ ಬೇರೆ ಕೆಲಸಗಳಿಗೆ ಗೃಹಲಕ್ಷ್ಮೀ ಹಣ ನಂಬಿರುವ ಜನರಿಗೆ ಸದ್ಯದಲ್ಲಿ ಹಣ ಬರಲಿದೆ. ಸರಕಾರ ನೀಡಿರುವ ವಾಗ್ದಾನ, ಸಿಎಂ ಹಾಗೂ ಡಿಕೆ ಶಿವಕುಮಾರ್ ಜೊತೆಗೆ ನಾನು ಯಾವುದೇ ಕಾರಣಕ್ಕೂ ಕೊಟ್ಟ ಮಾತು ಸುಳ್ಳು ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಹಣದ ಬಗ್ಗೆ ಚಿಂತೆ ಬೇಡ. 3 ತಿಂಗಳ ಹಣವೂ ಶೀಘ್ರದಲ್ಲಿ ಬರಲಿದೆ ಎಂದು ಹೇಳಿದ್ದಾರೆ.





























































































































error: Content is protected !!
Scroll to Top