ಮುದ್ರಾಡಿ ಪ್ರೌಢಶಾಲೆಯಲ್ಲಿ ಅಂಬಾತನಯರ ಸಂಸ್ಮರಣೆ

ಹೆಬ್ರಿ : ಅಂಬಾತನಯ ಮುದ್ರಾಡಿಯವರು ಕನ್ನಡ ಸಾರಸ್ವತ ಲೋಕದ ಮರೆಯಲಾಗದ ಮಾಣಿಕ್ಯ. ಮುದ್ರಾಡಿ ಊರಿಗೆ ಶಾಶ್ವತ ಮಾನ್ಯತೆ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಎಂ.ಎನ್.ಡಿ.ಎಸ್.ಎಂ. ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ ಅಭಿಪ್ರಾಯಪಟ್ಟರು. ಅವರು ಫೆ. 21ರಂದು ಮುದ್ರಾಡಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಅಂಬಾತನಯ ಮುದ್ರಾಡಿಯವರ ದ್ವಿತೀಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕ ಪಿ. ವಿ. ಆನಂದ ಸಾಲಿಗ್ರಾಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಮಹೇಶ್ ನಾಯ್ಕ್ ಸ್ವಾಗತಿಸಿ, ದೈಹಿಕ ಶಿಕ್ಷಕ ರಘುಪತಿ ಹೆಬ್ಬಾರ್ ವಂದಿಸಿದರು. ಶ್ಯಾಮಲ ಕೊಠಾರಿ ಸಹಕರಿಸಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಂಬಾತನಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.





























































































































error: Content is protected !!
Scroll to Top