ಕಾರ್ಕಳ : ಜಿಯೋ ಫೈಬರ್ ಮೂಲಕ ವೇಗದ ಇಂಟರ್‌ನೆಟ್ ನೊಂದಿಗೆ ಟಿವಿ ಚಾನೆಲ್ ಲಭ್ಯವಾಗುತ್ತಿರುವುದು ಕಾರ್ಕಳದ ಜನತೆಗೆ ಬಹಳ ಪ್ರಯೋಜನಕಾರಿ ಎಂದು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಅಭಿಪ್ರಾಯಪಟ್ಟರು.
ಅವರು ಫೆ. 21ರಂದು ಕಾರ್ಕಳ ಬಸ್ ನಿಲ್ದಾಣ ಬಳಿ ಜಿಯೋ ಫೈಬರ್ ಹಾಗೂ ಏರ್‌ಫೈಬರ್ ರೀಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಯೋ ಉತ್ತಮ ಸರ್ವಿಸ್ ಮೂಲಕ ಮನೆಮಾತಾಗಿದೆ. ನಮ್ಮ ದೇವಸ್ಥಾನದಲ್ಲೂ ಜಿಯೋಫೈಬರ್ ಸಂಪರ್ಕವಿದೆ. ಮುಂದಿನ ದಿನಗಳಲ್ಲಿ ಇದರ ಸೇವೆ ಸರ್ವರಿಗೂ ದೊರೆಯುವಂತಾಗಲಿ ಎಂದು ಆಶಿಸಿದರು.

ಉಡುಪಿ ಜಿಯೋ ಸೆಂಟರ್ ಮ್ಯಾನೇಜರ್ ನಾಗರಾಜ್ ಕೋಡಿ ಮಾತನಾಡಿ, ಕಾರ್ಕಳ ನಗರದಲ್ಲಿ ಈಗಾಗಲೇ 810 ಜಿಯೋ ಫೈಬರ್ ಸಂಪರ್ಕ ನೀಡಲಾಗಿದೆ. ಇದೀಗ ಜಿಯೋ ಏರ್‌ಫೈಬರ್ ಮುಖಾಂತರ ಗ್ರಾಮೀಣ ಪ್ರದೇಶಕ್ಕೂ ಸೇವೆ ವಿಸ್ತರಿಸಲಾಗುತ್ತಿದೆ. ಇದರೊಂದಿಗೆ ಗ್ರಾಮೀಣ ಭಾಗದ ಜನತೆಯ ಬಹುಸಮಯದ ಬೇಡಿಕೆ ಈಡೇರುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಆಧುನಿಕ ತಂತ್ರಜ್ಞಾನದೊಂದಿಗೆ ಜಿಯೋ ಅತ್ಯುತ್ತಮ ರೀತಿಯಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದೆ ಎಂದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ಮಾತನಾಡಿ ಡಿಜಿಟಲ್ ಇಂಡಿಯಾ ಕಲ್ಪನೆಯಂತೆ ಜಿಯೋ ಕಾರ್ಯನಿರ್ವಹಿಸುತ್ತಿದೆ. ಜಿಯೋ ವೇಗದ ಇಂಟರ್ ನೆಟ್‌ನೊಂದಿಗೆ ಟಿವಿ, ಒಟಿಟಿ ಸೌಲಭ್ಯ ನೀಡುತ್ತಿರುವುದು ಗ್ರಾಹಕರನ್ನು ಸಂತೃಪ್ತಿ ಪಡಿಸಿದೆ ಎಂದರು.
ಉದ್ಯಮಿ ನೇಮಿರಾಜ ಆರಿಗ, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮೆಶ್ ಕಲ್ಲೊಟ್ಟೆ ಕಾರ್ಯಕ್ರಮ ನಿರ್ವಹಿಸಿದರು.
ಜಿಯೋ ಫೈಬರ್ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಇಂಟರ್‌ನೆಟ್ ಸೇವೆ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಬಳಕೆದಾರರಿಗೆ ಸಿಹಿಸುದ್ದಿಯಾಗಿದೆ. ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಜಿಯೋ ಸಂಪರ್ಕ ಹೊಂದಲು ಇಚ್ಛಿಸುವವರು 9901764497 ನಂಬರ್ ಸಂಪರ್ಕಿಸಬಹುದಾಗಿದೆ.
ಶ್ರೀಕಾಂತ್
ವಿತರಕರು, ಜಿಯೋ ಫೈಬರ್
































































