ಕಾರ್ಕಳ : ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ರಾಷ್ಟ್ರ ಮಟ್ಟದ ಜೆಇಇ ಮೈನ್ – 2025 ಪ್ರಥಮ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರೈಸ್ಟ್ಕಿಂಗ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅನಂತ್ ಎನ್. ಕೆ. 99.0927 ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ. ಇವರು ಭೌತಶಾಸ್ತ್ರದಲ್ಲಿ 98.6068, ರಸಾಯನಶಾಸ್ತ್ರದಲ್ಲಿ 99.3449, ಗಣಿತಶಾಸ್ತ್ರದಲ್ಲಿ 97.2966 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಸ್ಥೆಯಿಂದ ಒಟ್ಟು 8 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಜೆಇಇ ಮೈನ್ ಪರೀಕ್ಷೆ : ಕ್ರೈಸ್ಟ್ಕಿಂಗ್ನ ಅನಂತ್ಗೆ 99.0927 ಪರ್ಸೆಂಟೈಲ್






























































