ಕಾರ್ಕಳ : ಮಾಳ ಪೆಟ್ರೋಲ್ ಪಂಪ್ ಬಳಿ ಮುಳ್ಳೂರು ಎಂಬಲ್ಲಿ ಇಂದು ಬೆಳಿಗ್ಗೆ ಗೂಡ್ಸ್ ವಾಹನ ಪಲ್ಟಿಯಾಗಿ ಗಾಯಗೊಂಡಿದ್ದ ಐವರು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಮಹಾರಾಷ್ಟ್ರ ಮೂಲದ ಜಿತೇಂದರ್ (38) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗೂಡ್ಸ್ ವಾಹನದಲ್ಲಿದ್ದ ಹುಬ್ಬಳ್ಳಿಯ ರಾಜ(37), ಆದಿತ್ಯ (20) ಭದ್ರಾವತಿಯ ಬಾಬು (55) ಹಾಗೂ ಶಾಬಾಸ್ (25) ಗಂಬೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಜಾತ್ರೆಯಲ್ಲಿ ವ್ಯಾಪಾರ ನಡೆಸುವವರಾಗಿದ್ದು, ಕಳಸದಲ್ಲಿ ವ್ಯಾಪಾರ ಮುಗಿಸಿ ಮಂದಾರ್ತಿಯೆಡೆಗೆ ಸಾಗುವಾಗ ಮಾಳ ಗೇಟ್ ದಾಟಿ ಪೆಟ್ರೋಲ್ ಪಂಪ್ ಬಳಿ ಬ್ರೇಕ್ ಫೈಲ್ ಆಗಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ.
ಮಾಳ : ಗೂಡ್ಸ್ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಓರ್ವ ನಿಧನ – ನಾಲ್ವರು ಗಂಭೀರ






























































