ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ 108 ಸೂರ್ಯ ನಮಸ್ಕಾರ ಯಜ್ಞ

ಕಾರ್ಕಳ : ಕುಂದಾಪುರದ ಶ್ರೀ ಪತಂಜಲಿ ಯೋಗ ಸಮಿತಿ ಮತ್ತು ಕುಂದಾಪುರ ತಾಲೂಕು ಕ್ರೀಡಾ ಭಾರತಿಯ ಜಂಟಿ ಆಶ್ರಯದಲ್ಲಿ ರಥ ಸಪ್ತಮಿ ಪ್ರಯುಕ್ತ ಫೆ.9ರಂದು ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ 108 ಸೂರ್ಯ ನಮಸ್ಕಾರ ಯಜ್ಞ ನೆರವೇರಿತು.

ವಿದ್ವಾನ್ ಚಂದ್ರಶೇಖರ ಅಡಿಗ ಆದಿತ್ಯ ಹೃದಯ ಮಹಾ ಯಜ್ಞವನ್ನು ನೆರವೇರಿಸಿದರು. ಶಂಕರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕ್ರೀಡಾ ಭಾರತಿ ಜಿಲ್ಲಾಧ್ಯಕ್ಷ ಮಂಜುನಾಥ ಶೆಟ್ಟಿ, ಶ್ರೀ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿವೇಕ್ ಪೈ ಮತ್ತು ಸದಸ್ಯರು, ವಿಭಾಗ ಸಂಯೋಜಕ ಪ್ರಸನ್ನ ಶೆಣೈ, ಉಡುಪಿ ಜಿಲ್ಲಾ ಕ್ರೀಡಾ ಭಾರತಿಯ ಕಾರ್ಯದರ್ಶಿ ಲಿಂಗಯ್ಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹೆಚ್. ಕೆ. ಗಣಪ್ಪಯ್ಯ ಹಾಗೂ ಪ್ರಕಾಶ್ ದಂಬೆ ಉಪಸ್ಥಿತರಿದ್ದರು. ಸತತ 18 ವರ್ಷಗಳಿಂದ ಯೋಗಾರ್ಥಿಗಳಾಗಿ ಭಾಗವಹಿಸಿದ ಹಿರಿಯರನ್ನು ಗೌರವಿಸಲಾಯಿತು. ರಾಮದಾಸ್ ಶೆಣೈ ಕಾರ್ಯಕ್ರಮ ನಿರೂಪಿಸಿ, ದಿನೇಶ್ ಸಾರಂಗ ವಂದಿಸಿದರು. 58 ಯೋಗ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.









































































































error: Content is protected !!
Scroll to Top