ತೆಂಗಿನ ಕಾಯಿ ಕೊಯ್ಯಲು ಹೋದ ವ್ಯಕ್ತಿ ತೋಡಿಗೆ ಬಿದ್ದು ಸಾವು

ಅಜೆಕಾರು : ತೆಂಗಿನ ಕಾಯಿ ಕೊಯ್ಯಲು ಹೋದ ವ್ಯಕ್ತಿಯೋರ್ವರು ತೋಡಿಗೆ ಬಿದ್ದು ಸಾವನಪ್ಪಿದ ಘಟನೆ ಫೆ. 9ರಂದು ಮರ್ಣೆ ಗ್ರಾಮದಲ್ಲಿ ಸಂಭವಿಸಿದೆ. ಶೀನ‌ (77) ಮೃತ ದುರ್ದೈವಿ. ಇವರು ಕೃಷಿ ಕೆಲಸ ಮಾಡಿಕೊಂಡಿದ್ದು ಫೆ. 9ರಂದು ಬೆಳಿಗ್ಗೆ 10.45 ಗಂಟೆಗೆ ತೆಂಗಿನ ಕಾಯಿ ಹಾಗೂ ಸೀಯಾಳ ಕೊಯ್ಯಲು ದೋಂಟಿ ತೆಗೆದುಕೊಂಡು ನೀಲಬೈಲು ಎಂಬಲ್ಲಿಗೆ ಹೋದವರು ಸಂಜೆಯಾದರೂ ವಾಪಾಸ್ಸು ಬರಲಿಲ್ಲ. ಹುಡುಕಿದಾಗ ಅವರ ಮೃತ ದೇಹವು ಗದ್ದೆ ಬದಿಯ ತೋಡಿನ ನೀರಿನಲ್ಲಿ ತೇಲುತ್ತಿತ್ತು. ತೆಂಗಿನ ಕಾಯಿ ಕೊಯ್ಯುವಾಗ ಆಕಸ್ಮಿಕವಾಗಿ ತೋಡಿನ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top