ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ – ಸನ್ಮಾನ ಕಾರ್ಯಕ್ರಮ
ಕಾರ್ಕಳ : ಕರಕರಿ ಫ್ರೆಂಡ್ಸ್ ಸೇವಾ ಬಳಗ ಕರ್ನಾಟಕ ಇದರ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್, ಕೊಡೆ, ಪುಸ್ತಕ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಹಾಗೂ ಕರಕರಿ ಫ್ರೆಂಡ್ಸ್ ಅರ್ಪಿಸುವ ʼಕೌಡೂರು ಶ್ರೀ ಮಾರಿಯಮ್ಮನ ಸಿಂಗಾರʼ ಎಂಬ ಭಕ್ತಿಗೀತೆ ಮೇ 19ರಂದು ಸಂಜೆ 3 ಗಂಟೆಗೆ ಬೈಲೂರು ಶ್ರೀ ಮಾರಿಯಮ್ಮ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಕರಿ ಫ್ರೆಂಡ್ಸ್ ಸೇವಾಬಳಗದ ಅಧ್ಯಕ್ಷ ಸದಾನಂದ ಸಾಲಿಯಾನ್ ವಹಿಸಲಿದ್ದು, ಶಾಸಕ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಬೋಳ ಪ್ರಶಾಂತ್ ಪ್ರಸಾದ್ ಕಾಮತ್ ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಕೌಡೂರು, ಉದ್ಯಮಿ ಪ್ರಶಾಂತ್ ಶೆಟ್ಟಿ, ಬಸ್ತ್ರಿ ಬೈಲೂರು ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಉದಯ ಕುಮಾರ್, ಶಿಶಿರ್ ಶೆಟ್ಟಿ ಜಾರ್ಕಳ, ಶಕುಂತಳರಾವ್ ನೀರೆ ಬೈಲೂರು, ಕರಕರಿ ಫ್ರೆಂಡ್ಸ್ ಸ್ಥಾಪಕ ಸದಸ್ಯ ಗಂಗಾಧರ ಮಿತ್ರ, ಕೌಡೂರು ಗ್ರಾಮ ಪಂಚಾಯತ್ ಸದಸ್ಯ ಸಚ್ಚಿದಾನಂದ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೆ.ಮಂಜುನಾಥ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ರಿದಮ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ಬೈಲೂರು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.































































