ಹೆಬ್ರಿ : ಹೃದಯಘಾತದಿಂದ ಕಾರ್ಮಿಕ ಸಾವು

ಹೆಬ್ರಿ : ಹೃದಯಘಾತದಿಂದ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಮೇ 16ರಂದು ಶಿವಪುರದಲ್ಲಿ ಸಂಭವಿಸಿದೆ. ಹರಿಖಂಡಿಗೆ ಸಾಂತ್ಯಾರು ಗ್ರಾಮದ ಸತೀಶ್ (45) ಮೃತದುರ್ದೈವಿ. ಇವರು ಶಿವಪುರ ಗ್ರಾಮದ ಕಲ್ಮುಂಡ ಎಂಬಲ್ಲಿ ಸುಂದರ ಹೆಗ್ಡೆಯವರಿಗೆ ಸೇರಿದ ಬಾವಿಯ ಕೆಲಸಕ್ಕೆ ಹೋದವರು, ಕೆಲಸ ಮಾಡುತ್ತಿದ್ದ ವೇಳೆ ಅಂಗಳದಲ್ಲಿ ಹೃದಯಘಾತದಿಂದ ಕುಸಿದು ಬಿದ್ದಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಅಸ್ಪತ್ರೆಗೆ 108 ವಾಹನದಲ್ಲಿ ಸಾಗಿಸುವಾಗ ದಾರಿ ಮದ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top