ಮನೋಹರ ಪ್ರಸಾದ್‌ ಅವರ ನಿಧನಕ್ಕೆ ಸುನಿಲ್‌ ಕುಮಾರ್‌ ಸಂತಾಪ

ಕಾರ್ಕಳ : ಉದಯವಾಣಿ ಪತ್ರಿಕೆಯ ಹಿರಿಯ ಪತ್ರಕರ್ತರಾಗಿದ್ದ ಮನೋಹರ್ ಪ್ರಸಾದ್ ಅವರು ಇಂದು ಮುಂಜಾನೆ ನಿಧನ ಹೊಂದಿದ ಸುದ್ದಿ ಕೇಳಿ ಅತೀವ ದುಃಖವಾಯಿತು ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಸಂತಾಪ ಸೂಚಿಸಿದ್ದಾರೆ.
ಚಿಂತಕ, ಲೇಖಕ, ಸಂಶೋಧಕ, ಕಾರ್ಯಕ್ರಮ ನಿರ್ವಾಹಕ, ಸ್ನೇಹ ಜೀವಿ, ಸದಾ ನಗುಮೊಗದಿಂದ ಜನರೊಂದಿಗೆ ಬೆರೆಯುತ್ತಿದ್ದ ಮನೋಹರ್‌ ಪ್ರಸಾದ್‌ ಅವರು ಮಾಧ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಮಾಧ್ಯಮ ಕ್ಷೇತ್ರದಲ್ಲಿನ ಅವರ ಅಪಾರ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು. ಅವರ ಕುಟುಂಬ ವರ್ಗಕ್ಕೆ ಹಾಗೂ ಬಂಧುಗಳಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಶೋಕ ಸಂದೇಶದಲ್ಲಿ ಸುನಿಲ್‌ ಕುಮಾರ್‌ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top