ಮುನಿಯಾಲು : ಕಾರುಗಳ ಮುಖಾಮುಖಿ ಡಿಕ್ಕಿ

ಹೆಬ್ರಿ : ಕಾರುಗಳ ನಡುವೆ ಡಿಕ್ಕಿಯಾದ ಪರಿಣಾಮ ಚಾಲಕ ಸಾವನಪ್ಪಿದ ದುರ್ಘಟನೆ ಫೆ. 29ರಂದು ಸಂಭವಿಸಿದೆ. ಶ್ರೀ ಮಹಾಗಣಪತಿ ಜ್ಯುವೆಲ್ಲೆರ್ಸ್ ಶಾಪ್‌ ಮಾಲಕ ಜಗದೀಶ್‌ ಆಚಾರ್ಯ (74) ಮೃತ ದುರ್ದೈವಿ.
KA-05-NE-2013ನೇ ನೋಂದಾಯಿತ ಕಾರು ವೇಣೂರುನಿಂದ ಮುನಿಯಾಲು ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿರುವಾಗ ಜಗದೀಶ್‌ ಆಚಾರ್ಯ ಅವರು ಆಲ್ಟೋ ಕಾರಿನಲ್ಲಿ ಮುನಿಯಾಲು ಕಡೆಗೆ ಬರುತ್ತಿದ್ದು, ಮುನಿಯಾಲು ಪೇಟೆ ಮುಂಭಾಗದಲ್ಲಿ ಕಾರುಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಪರಿಣಾಮವಾಗಿ ಚಾಲಕ ಜಗದೀಶ್‌ ಆಚಾರ್ಯ ಅವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಜಗದೀಶ್‌ ಆಚಾರ್ಯ ಮೃತಪಟ್ಟಿರುತ್ತಾರೆ. ಇನ್ನೊಂದು ಕಾರಿನಲ್ಲಿ ಚಾಲಕ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದು, ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜಗದೀಶ್‌ ಆಚಾರ್ಯ ಅವರು ಮುನಿಯಾಲು ಸಾರ್ವಜನಿಕ ಗಣೇಶೋತ್ಸವ ಸ್ಥಾಪಕ ಸಮಿತಿಯ ಸದಸ್ಯರಾಗಿದ್ದರು. ಅಲ್ಲದೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಇವರು ಮುನಿಯಾಲು ಗ್ರಾಮದ ಗ್ರಾಮ ಮೊಕ್ತೇಸರರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.





























































































































error: Content is protected !!
Scroll to Top