ವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ – ಸ್ವಚ್ಛತಾ ಅಭಿಯಾನ

ಮೂಡುಬಿದಿರೆ : ಎಕ್ಸಲೆಂಟ್ ಕಾಲೇಜು ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಮತ್ತು ಸ್ವಚ್ಛತಾ ಅಭಿಯಾನ ಯೋಜನೆಯಡಿ ಸ್ವಸ್ಥ ಸಮಾಜದೆಡೆ ನಮ್ಮ ನಡೆ ಎಂಬ ಹೆಸರಿನಲ್ಲಿ ವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ತಿಮ್ಮಣ್ಣರಸರಾದಾ ಡಾ. ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದಲ್ಲಿ, ವೇಣೂರು ಶ್ರೀ ಬಾಹುಬಲಿ ಮಸ್ತಕಾಭಿಷೇಕ ಸಮಿತಿ ಸಭೆ, ವೇಣೂರು ಪಂಚಾಯತ್, ವಿದ್ಯೋದಯ ವಿದ್ಯಾ ಸಂಸ್ಥೆಗಳು, ವೇಣೂರು ಸರಕಾರಿ ಪ್ರೌಢ ಶಾಲೆ, ಲಯನ್ಸ್ ಕ್ಲಬ್, ಶ್ರೀ ಬಾಹುಬಲಿ ಯುವಜನ ಸಂಘದ ಸಹಯೋಗದೊಂದಿಗೆ ವೇಣೂರು ನಗರ ಸ್ವಚ್ಛತಾ ಕಾರ್ಯಕ್ರಮ ಬಾಹುಬಲಿ ಬೆಟ್ಟದ ಬಳಿಯಿಂದ ಜ. 27ರಂದು ಆರಂಭಗೊಂಡಿತು.

ಕೆಳಗಿನ ಪೇಟೆ, ಬಂಟ್ವಾಳ ಕ್ರಾಸ್, ಸರಕಾರಿ ಶಾಲೆಯ ದ್ವಾರ, ಅರಣ್ಯ ಇಲಾಖೆ ಕಚೇರಿ ಬಳಿ, ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ಸೇರಿದಂತೆ ಏಕ ಕಾಲದಲ್ಲಿ ಆರು ಕಡೆಗಳಿಂದ ಸ್ವಚ್ಛತಾ ಕಾರ್ಯಕ್ರಮ ಪ್ರಾರಂಭಗೊಂಡಿತು. ವೇಣೂರಿನ ಡಾ ಶಾಂತಿಪ್ರಸಾದ್, ನಮನ ಕ್ಲಿನಿಕ್ ಹಾಗೂ ವಿದ್ಯೋದಯ ಶಾಲೆಯ ಸಂಚಾಲಕ ಶಿವರಾಮ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಕರ್ನಾಟಕ ಸರಕಾರದ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಸ್ವಚ್ಛತೆ ಶುದ್ಧ ಮನಸ್ಸು ಬಲಿಷ್ಠ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ತ್ಯಾಗ ಮೂರ್ತಿಯಾದ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಸ್ವಚ್ಛತಾ ಹಿ ಸೇವಾ ಎಂಬ ಘೋಷ ವಾಕ್ಯದೊಂದಿಗೆ ಎಕ್ಸಲೆಂಟ್ ಸಂಸ್ಥೆ ತೊಡಗಿಸಿಕೊಂಡ ಈ ಕ್ರಮ ಸರ್ವರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಮೂಡುಬಿದಿರೆಯ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ, ಪ್ರಕೃತಿ ನಮ್ಮ ಭವಿಷ್ಯವನ್ನು ಭದ್ರವಾಗಿಸುತ್ತದೆ. ಅದನ್ನು ಸದಾ ಸರ್ವದ ಸ್ವಚ್ಛವಾಗಿಡುವುದು ಮನುಕುಲದ ಹೊಣೆಗಾರಿಕೆ ಎಂದರು.

ವೇದಿಕೆಯಲ್ಲಿ ಕಾರ್ಯದರ್ಶಿ ರಶ್ಮಿತಾ ಜೈನ್, ವೇಣೂರಯ ಲಯನ್ಸ್ ಕ್ಲಬ್‌ನ ಸುಕುಮಾರ, ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಪ್ರಭಾಶ್ ಚಂದ್ರ, ಮಹಾಮಸ್ತಕಭಿಷೇಕ ಸಮಿತಿಯ ಸದಸ್ಯರಾದ ಮಹಾವೀರ, ನವೀನ್, ಗುಣಪಾಲ, ನವೀನ್ ಚಂದ್ರ, ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್ ಉಜಿರೆ, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಹರೀಶ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ಚೈತ್ರಾ ರೈ ಮುಂತಾದವರು ಉಪಸ್ಥಿತರಿದ್ದರು.
ಡಾ. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರ್ವಹಿಸಿದರು.





























































































































error: Content is protected !!
Scroll to Top