ಮಣಿಪಾಲ : ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗೆ ದಾಳಿ ನಡೆಸಿದ ಮಣಿಪಾಲ ಪೋಲಿಸರು ಇಬ್ಬರನ್ನು ಬಂಧಿಸಿದ್ದು, ದಾಳಿಯ ವೇಳೆ ಓರ್ವ ಪರಾರಿಯಾದ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿ ಜು. 22 ರಂದು ನಡೆದಿದೆ.
ಖಚಿತ ಮಾಹಿತಿ ಪಡೆದ ಮಣಿಪಾಲ ಪೋಲಿಸ್ ನಿರೀಕ್ಷಕ ದೇವರಾಜ್ ಟಿ. ವಿ. ಮತ್ತವರ ತಂಡ ದಾಳಿ ನಡೆಸಿ ಅನೈತಿಕ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದು ಓರ್ವ ಪರಾರಿಯಾಗಿದ್ದಾನೆ. ಈ ಕಾರ್ಯಾಚರಣೆಯಲ್ಲಿ 5 ಮಹಿಳೆಯರನ್ನು ರಕ್ಷಿಸಲಾಗಿದೆ. ಇವರಲ್ಲಿ ಮೂವರು ಬೆಂಗಳೂರಿನವರಾಗಿದ್ದು, ಒಬ್ಬಾಕೆ ಮುಂಬೈ ಮೂಲದವರಾಗಿದ್ದಾರೆ, ಮತ್ತೋರ್ವ ಮಹಿಳೆ ನಾಸಿಕ್ ಮೂಲದವವರಾಗಿದ್ದಾರೆ. ಬಂಧಿತರಿಂದ 4 ಮೊಬೈಲ್ ಪೋನ್, 10 ಸಾವಿರ ರೂ. ನಗದು, ಕಾಂಡಮ್, ಕಾರು ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಲಾಮತ್ ಮತ್ತು ಚಂದ್ರ ಎಂಬವರನ್ನು ವಶಕ್ಕೆ ಪಡೆದಿದ್ದು, ದಾಳಿಯ ಸಮಯದಲ್ಲಿ ಖಾಲಿದ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ.
































































