ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಪಂ. ಸದಸ್ಯರಿಂದ ಜೀವ ಬೆದರಿಕೆ – ಮಹಿಳೆಯಿಂದ ಠಾಣೆಗೆ ದೂರು
ಕಾರ್ಕಳ : ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಸ್ಮಶಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದಲ್ಲದೆ, ನಿಂದಿಸಿ, ಜೀವ ಬೆದರಿಕೆಯೊಡ್ಡಿರುವುದಾಗಿ ರೆಂಜಾಳ ಗ್ರಾಮದ ಪೇರಲ್ದಬೆಟ್ಟು ಮನೆ ಸಂಪ ಅವರು ಗ್ರಾ. ಪಂ. ಸದಸ್ಯರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜು. 4 ರಂದು ರೆಂಜಾಳ ಗ್ರಾ. ಪಂ. ಸದಸ್ಯ ರಮೇಶ್ ಅವರು ತನ್ನ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜಾಗವನ್ನು ಜೇಸಿಬಿಯಿಂದ ಸಮತಟ್ಟುಗೊಳಿಸಿ ಸ್ಮಶಾನ ನಿರ್ಮಿಸಲು ಗುದ್ದಲಿ ಪೂಜೆ ಮಾಡಿರುತ್ತಾರೆ. ಈ ಸಂದರ್ಭ ತಾನು ರಮೇಶ್ ಅವರಲ್ಲಿ ಇದು ನನ್ನ ಹಕ್ಕಿನ ಸ್ಥಿರಾಸ್ತಿಯೆಂದಾಗ ಅವರು ಜಾತಿ ನಿಂದನೆ ಮಾಡಿರುತ್ತಾರೆ. ಅಲ್ಲದೇ ಜೀವ ಬೆದರಿಕೆಯೊಡ್ಡಿರುತ್ತಾರೆ ಎಂದು ಸಂಪ ಅವರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
































































