ಮೂಡಬಿದ್ರೆ ಎಕ್ಸಲೆಂಟ್‌ನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ

ಕಾಂತಾರ ಖ್ಯಾತಿಯ ಮಾನಸಿ ಸುಧೀರ್‌ ಅವರಿಗೆ ಅಭಿನಯ ಶಂಕರಿ ಬಿರುದು

ಮೂಡಬಿದಿರೆ : ಕಲೆಯ ಆಸಕ್ತಿ ನಮ್ಮನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವುದು. ಕಲೆ ನಮ್ಮನ್ನು ಬಹುದೊಡ್ಡ ಕಲಾವಿದರನ್ನಾಗಿ ರೂಪಿಸುವುದು ಎಂದು ಕಾಂತಾರ ಖ್ಯಾತಿಯ ಮಾನಸಿ ಸುಧೀರ್‌ ಅಭಿಪ್ರಾಯಪಟ್ಟರು. ಅವರು ಜು. 19ರಂದು ಮೂಡಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್‌ ಕಾಲೇಜಿನ 2023-24 ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕಲೆಯು ಬರೀ ಕೌಶಲ್ಯವಲ್ಲ, ಕಲೆಯು ಕೌಶಲ್ಯವನ್ನು ಮೀರಿದ್ದು. ಕೌಶಲ್ಯವು ಸತತ ಪ್ರಯತ್ನದಿಂದ ಬರುತ್ತದೆ. ಎಕ್ಸಲೆಂಟ್‌ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪೂರಕವಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಉತ್ತಮ ವಿಚಾರ. ಇಲ್ಲಿನ ವಾತಾವರಣ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಮಾನಸಿ ಅವರು ಹೇಳಿದರು.

ಅಭಿನಯ ಶಂಕರಿ ಬಿರುದು
ಚಲನಚಿತ್ರ ನಟಿ, ಭರತನಾಟ್ಯ, ರಂಗಭೂಮಿ ಕಲಾವಿದೆ ಮಾನಸಿ ಸುಧೀರ್‌ ಅವರನ್ನು ಎಕ್ಸಲೆಂಟ್‌ ಸಂಸ್ಥೆಯು ಅಭಿನಯ ಶಂಕರಿ ಎಂಬ ಬಿರುದು ನೀಡಿ ಗೌರವಿಸಿತು. ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಅಭಿನಂದನಾ ಪತ್ರ ವಾಚಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್‌ ಜೈನ್‌, ಕಲೆ, ವಿವಿಧ ಹವ್ಯಾಸಗಳನ್ನು ಮೈಗೂಡಿಸಿಕೊಂಡಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುವುದು. ದಿನಂಪ್ರತಿ ಸಂತೋಷದಿಂದ ಇರಬೇಕು, ಸಂತೋಷಕ್ಕಾಗಿ ವಿಶೇಷ ದಿನವನ್ನು ಹುಡುಕಬಾರದು. ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಕ್ಸಲೆಂಟ್‌ ಸಂಸ್ಥೆಯಲ್ಲಿ ಯಕ್ಷಗಾನ, ಸಂಗೀತ, ಕರಾಟೆ, ನೃತ್ಯ, ಭರತನಾಟ್ಯ, ಚೆಸ್‌, ಕೊಳಲು, ತಬಲ ಮತ್ತು ಚೆಂಡೆ ಮೊದಲಾದ ಕುರಿತು ಪ್ರಸಿದ್ಧ ಕಲಾವಿದರಿಂದ ತರಬೇತಿ ನೀಡಲಾಗುತ್ತಿದೆ ಎಂದರು.


ಎಕ್ಸಲೆಂಟ್‌ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್‌ ಮಾತನಾಡಿ, ಕಲಾ ಚಟುವಟಿಕೆಗಳನ್ನು ಪ್ರೀತಿಯಿಂದ ಆಸ್ವಾದಿಸಿ ವಿದ್ಯಾರ್ಥಿಗಳನ್ನು ಕಲೆಯಲ್ಲಿ ಮಾಸ್ಟರ್ಸ್ ಮಾಡುವುದು ನಮ್ಮ ಕನಸಾಗಿದೆ ಎಂದರು. ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್, ಮುಖ್ಯಶಿಕ್ಷಕ ಶಿವಪ್ರಸಾದ್ ಭಟ್, ಸಹ ಮುಖ್ಯಶಿಕ್ಷಕರಾದ ಜಯಶೀಲ, ಸೆಂಟ್ರಲ್ ಶಾಲೆಯ ಉಪ ಪ್ರಾಂಶುಪಾಲೆ ವಿಮಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೌಲ್ಯ ಸ್ವಾಗತಿಸಿ, ವಿದ್ಯಾರ್ಥಿ ಸಂಜಿತ್ ನಿರೂಪಿಸಿದರು. ಶ್ಯಾಮಿಲಿ ಹೆಗ್ಡೆ ವಂದಿಸಿದರು.

ಸಾಂಸ್ಕೃತಿಕ ವಿಭಾಗದಲ್ಲಿ ತರಬೇತಿ ನೀಡುವ ಶಿಕ್ಷಕರಾದ ಮಹಾವೀರ ಪಾಂಡಿ ಯಕ್ಷಗಾನ, ಸಂಗೀತ ವಿದ್ವಾನ್‌ ಯಶವಂತ್‌, ಕರಾಟೆ ಸರ್ಫರಾಜ್‌, ನೃತ್ಯ ರೂಪೇಶ್‌, ತಬಲ ಪ್ರಜ್ವಲ್‌ ಆಚಾರ್ಯ, ಕೊಳಲು ಲೋಕೇಶ್‌ ಸಂಪಿಗೆ, ಚಂಡೆ ಚಂದ್ರಶೇಖರ ಆಚಾರ್ಯ, ಚೆಸ್ ಡೆರಿಕ್‌ ಪಿಂಟೋ, ಕಲೆ ಭಾಸ್ಕರ್‌ ನೆಲ್ಯಾಡಿ, ಭರತನಾಟ್ಯ ರಶ್ಮಿತಾ, ಕೀಬೋರ್ಡ್‌ ಸದಾಶಿವ ಭಟ್‌ ಮತ್ತು ಕ್ರಾಫ್ಟ್‌ ಚೇತನ ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಿದ್ದಾರೆ.













































































error: Content is protected !!
Scroll to Top