ಮೇ 31 : ಕಾರ್ಕಳದಲ್ಲಿ ತೆಲಿಕೆದ ಸಂಭ್ರಮ – ತುಳು ಸ್ಟಾಂಡ್ ಅಪ್ ಕಾಮಿಡಿ ಸ್ಪರ್ಧೆ

ಕಾರ್ಕಳ : ತೆಲಿಕೆದ ತೆನಾಲಿ ತಂಡ ಕಾರ್ಕಳ ಹಾಗೂ ಬಂಡಿಮಠ ಫೌಂಡೇಶನ್ ಇವರ ಸಹಯೋಗದಲ್ಲಿ ಪೆರ್ವಾಜೆ ಬಿಲ್ಲವ ಸಂಘದ ದಿ| ಡಿ. ಆರ್. ರಾಜು. ವೇದಿಕೆಯಲ್ಲಿ ಮೇ 31ರಂದು ಮಧ್ಯಾಹ್ನ 2 ಗಂಟೆಗೆ ತೆಲಿಕೆದ ಸಂಭ್ರಮ 2026 : ತುಳು ಸ್ಟಾಂಡ್ ಅಪ್ ಕಾಮಿಡಿ – ತುಳುನಾಡು ಕಾಮಿಡಿ ಸ್ಟಾರ್‌ ಸ್ಪರ್ಧೆ ನಡೆಯಲಿದೆ.

ಕಾರ್ಕಳ ರಂಗಭೂಮಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಡೆಯುವ ಈ ಸ್ಪರ್ಧೆಯಲ್ಲಿ ತುಳುನಾಡಿನ ಹೆಸರಾಂತ ಸ್ಟಾಂಡ್ ಅಪ್ ಕಲಾವಿದರು ಭಾಗವಹಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಮಧ್ಯಾಹ್ನ 2 ಗಂಟೆಯಿಂದ ಮಂಗಳೂರಿನ ಬಾಲ ಪ್ರತಿಭೆ ಯಜತ್ ಯಶ್ವಿನ್ ಅವರಿಂದ ಮೈಂಡ್ ಮಿರಕಲ್ (ಗಾಂಧಾರಿ ವಿದ್ಯೆ) ಕಾರ್ಯಕ್ರಮ ನಡೆಯಲಿದೆ. ರಾತ್ರಿ 6 ಗಂಟೆಗೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9845439720 ಅಥವಾ 9845176856 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

















































error: Content is protected !!
Scroll to Top