ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯನವರ ಬ್ರೇಕ್‌ಫಾಸ್ಟ್ ಸಭೆಗೆ ಆಗಮಿಸಿದ್ದಾರೆ. ಈ ವೇಳೆ ಸಿದ್ದು ಬೆಂಬಲಿಗರ ಸಿದ್ದರಾಮಯ್ಯಗೆ ಜೈಕಾರ ಹಾಕಿದರು. 5 ವರ್ಷ ಸಿದ್ದ ಸಿಎಂ ಎಂದು ಘೋಷಣೆ ಕೂಗಿ ಡಿಕೆಶಿ ವಿರುದ್ಧ ಆಕ್ರೋಶ ಹೊರಹಾಕಿದರು.
ಈಗಾಗಲೇ ಕಾವೇರಿ ನಿವಾಸಕ್ಕೆ ಸಚಿವರಾದ ಕೆಜೆ ಜಾರ್ಜ್, ಭೈರತಿ ಸುರೇಶ್, ಸಂತೋಷ್ ಲಾಡ್, ಎಂಸಿ ಸುಧಾಕರ್, ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಎಸ್‌ಎಸ್ ಮಲ್ಲಿಕಾರ್ಜುನ್, ಕೆ.ವೆಂಕಟೇಶ್ ಬಂದಿದ್ದಾರೆ
ಜಮೀರ್ ಅಹಮದ್ ತಮ್ಮ ನಿವಾಸದಿಂದ ನೇರ ಚಾಮರಾಜಪೇಟೆ ಮೈದಾನದ ಕಡೆ ತೆರಳಿದ್ದಾರೆ. ಬಕ್ರೀದ್ ಹಿನ್ನೆಲೆ ಪ್ರಾರ್ಥನೆಗೆ ತೆರಳಿದ ಬಳಿಕ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.
























