ಬಸ್ಸ್‌ – ಕಾರಿನ ನಡುವೆ ಡಿಕ್ಕಿ

ಕಾರ್ಕಳ : ಬಸ್ಸು ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಪ್ರಯಾಣಿಕರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದ ಘಟನೆ ಮೇ 28ರಂದು ಕಾಂತಾವಾರ ಕ್ರಾಸ್‌ನಲ್ಲಿ ನಡೆದಿದೆ.
ಕಾಂತಾವರ ಕ್ರಾಸ್‌ನಿಂದ ಮೂಡುಬಿದಿರೆ – ಮಂಗಳೂರು ಹೆದ್ದಾರಿಯತ್ತ ಸಾಗುತ್ತಿದ್ದ ಬಸ್‌ ಮತ್ತು ಮಂಗಳೂರಿನಿಂದ ಶೃಂಗೇರಿಯತ್ತ ಹೋಗುತ್ತಿದ್ದ ಕಾರಿನ ನಡುವೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಎರಡೂ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

















































error: Content is protected !!
Scroll to Top