ಕಾರ್ಕಳ : ಕಣಜಾರು ಮೂಡುಬೆಟ್ಟು ವಿಠಲ ಶೆಟ್ಟಿ (81) ಅವರು ಮೇ 26ರ ರಾತ್ರಿ ನಿಧನ ಹೊಂದಿದರು. ನೀರೆ ಬೈಲೂರು ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಇವರು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಮಧ್ಯಾಹ್ನ 2 ಗಂಟೆಗೆ ಸ್ವಗೃಹದಲ್ಲಿ ನಡೆಯಲಿದೆ.
ಕಣಜಾರು ಮೂಡುಬೆಟ್ಟು ವಿಠಲ ಶೆಟ್ಟಿ ನಿಧನ





