ಹೆತ್ತವರ ಸ್ಟೇಟಸ್‌ ಕಡಿಮೆಯಾಗದಂತೆ ನೋಡಿಕೊಳ್ಳಿ – ಮಂಜುನಾಥ ಜುನಗೊಂಡ

ಕಾರ್ಕಳ : ಅಪ್ಪ, ಅಮ್ಮನ ದಿನಾಚರಣೆ ಸಂದರ್ಭ ವಾಟ್ಸಪ್‌ ಸ್ಟೇಟಸ್‌ಗೆ ಅವರನ್ನು ಸೀಮಿತಗೊಳಿಸಿದೇ ಹೆತ್ತವರ ಸ್ಟೇಟಸ್‌ ಎಂದಿಗೂ ಕಡಿಮೆಯಾಗದಂತೆ ನೋಡಿಕೊಳ್ಳಬೇಕೆಂದು ಮಂಜುನಾಥ ಮ. ಜುನಗೊಂಡ ಹೇಳಿದರು.

ಅವರು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ದೇಶಸುಧಾ ಹಾಗೂ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಹೃದಯದಲ್ಲಿ ದೇಶಪ್ರೇಮ, ಉಸಿರಿನಲ್ಲಿ ಭಾರತ ಸ್ವರಾಜ್ಯ – ಛತ್ರಪತಿ ಶಿವಾಜಿ ಮಹಾರಾಜ್ ವಿಷಯದ ಕುರಿತು ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಜೀವನ, ರಾಷ್ಟ್ರಭಕ್ತಿ, ಸ್ವರಾಜ್ಯದ ಪರಿಕಲ್ಪನೆ ಹಾಗೂ ಯುವಜನರಲ್ಲಿ ದೇಶಪ್ರೇಮ ಉದ್ದೀಪನ ಕುರಿತು ಮಾತನಾಡಿದರು.

ಸನ್ಮಾನ
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ ಸಬ್ ಇನ್‌ಸ್ಪೆಕ್ಟರ್ ಆಗಿ ಆಯ್ಕೆಯಾದ ಸಂಹಿತ್ ಎಸ್. ಹೆಗ್ಡೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಲಕ್ಷ್ಮಣ ಅವರು ದೇಶಭಕ್ತಿ ಗೀತೆಯನ್ನು ಹಾಡಿದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ಟ್ರಸ್ಟಿಗಳಾದ ವಿದ್ಯಾ, ಅನಿಲ್ ಕುಮಾರ್ ಜೈನ್, ಸ್ಟೂಡೆಂಟ್ ಕೌನ್ಸಿಲರ್ ಪ್ರಸನ್ನ ಹೆಗ್ಡೆ, ಶ್ರೀ ಪದ್ಮನಗರ ಶ್ರೀ ಮಹಾಗಣಪತಿ ದೇವಸ್ಥಾನದ ನಿರ್ದೇಶಕರು, ಪ್ರಾಂಶುಪಾಲರು, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ, ಉಪಪ್ರಾಂಶುಪಾಲರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸವಿ ಶೆಟ್ಟಿ ಪ್ರಾರ್ಥಿಸಿದರು. ಶಿಕ್ಷಕಿ ವಿಜೇತಾ ರಾಣಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.























error: Content is protected !!
Scroll to Top