ಕಾರ್ಕಳ : ಕಾರ್ಕಳ ತಾಲೂಕು ಕಚೇರಿಯಲ್ಲಿ ಮೇ 27ರಂದು ಶಾಸಕ ವಿ. ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆ ನಡೆಯಿತು.
ಸಮಿತಿಯ ಮುಂದೆ ಹಾಜರುಪಡಿಸಿದ್ದ ಒಟ್ಟು 6 ಕಡತಗಳನ್ನು ಮಂಜೂರಾತಿ ಮಾಡಲಾಯಿತು. ತಹಶೀಲ್ದಾರ್ ಪ್ರದೀಪ ಆರ್., ಉಪ ತಹಶೀಲ್ದಾರ್ ಮಂಜುನಾಥ ನಾಯಕ್, ಕಂದಾಯ ನಿರೀಕ್ಷಕರಾದ ರಿಯಾಜ್ ಮಹಮ್ಮದ್, ಶಿವಪ್ರಸಾದ್ ವಿ. ರಾವ್, ವಿಷಯ ನಿರ್ವಾಹಕರಾದ ತಾರೇಶ್, ಪೂಜಾ ಬಿ., ಸಮಿತಿ ಸದಸ್ಯರಾದ ರಮೇಶ್ ಬಜಕಲ, ನವೀನ್ ದೇವಾಡಿಗ, ಸುನೀತ ಶೆಟ್ಟಿ, ಕಾರ್ಕಳ ಹಾಗೂ ಅಜೆಕಾರು ಹೋಬಳಿಯ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಅಕ್ರಮ ಸಕ್ರಮ ಸಮಿತಿ ಸಭೆ – 6 ಕಡತ ಮಂಜೂರಾತಿ


































