ಕಾರ್ಕಳ : ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ನಡೆಸಲಾದ 2023ರ ಸಾಲಿನ ಕಾಮೆಡ್ ಕೆ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿದ್ದು, ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಪ್ರಭಂಜನ್ ಬಾಬು ರವರು 99.9018 ಪರ್ಸಂಟೈಲ್‌ನೊಂದಿಗೆ 82ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಹಾಸನದ ಉದ್ಯಮಿ ಸುರೇಶ್ ಬಾಬು ಮತ್ತು ಮಮತಾ ಸುರೇಶ್ ದಂಪತಿ ಪುತ್ರ. ಈ ಬಾರಿಯ ಕೆಸಿಇಟಿ ಫಲಿತಾಂಶದಲ್ಲಿ 341ನೇ ರ‍್ಯಾಂಕ್ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಶ್ರೇಯಸ್ ಆರ್. ಗೌಡ 227, ಸಮ್ಯಕ್ ರಾವ್ 571 ಹಾಗೂ ಸಾತ್ವಿಕ್ ಬಿ.ಸಿ. 575ನೇ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.
ಕಾಮೆಡ್ ಕೆ ಫಲಿತಾಂಶ : ಜ್ಞಾನಸುಧಾದ ಪ್ರಭಂಜನ್ ಬಾಬುಗೆ ರಾಷ್ಟ್ರ ಮಟ್ಟದಲ್ಲಿ 82ನೇ ರ‍್ಯಾಂಕ್































































