ಪಡುಬಿದ್ರೆ : ಆಂಧ್ರ ಪ್ರದೇಶದ ವಿಜಯವಾಡ – ಗುಂಟೂರು ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್‌ನಲ್ಲಿ ಮೀನಿನ ಕಂಟೆನರ್ ಮತ್ತು ಸರಕು ಲಾರಿ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಉಚ್ಚಿಲದ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.
ಗಾಯಾಳು ಮೀನಿನ ಲಾರಿ ಚಾಲಕ ಉಚ್ಚಿಲ ಬಡಾ ಗ್ರಾಮದ ಬಶೀರ್ ಎಂದು ಗುರುತಿಸಲಾಗಿದೆ. ಸರಕು ಲಾರಿಯ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಆಂಧ್ರಪ್ರದೇಶದಲ್ಲಿ ಮೀನಿನ ಲಾರಿ ಅಪಘಾತ – ಉಚ್ಚಿಲದ ವ್ಯಕ್ತಿಗೆ ಗಂಭೀರ ಗಾಯ











































